ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯ ನಿಯೋಜನೆ ಆದೇಶ ರದ್ದುಪಡಿಸುವುದನ್ನ ತಡೆಹಿಡಿಯಿರಿ…ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಮನವಿ…
- TV10 Kannada Exclusive
- July 19, 2023
- No Comment
- 206
ಗ್ರಾಮ ಆಡಳಿತ ಅಧಿಕಾರಿಗಳ ಕರ್ತವ್ಯ ನಿಯೋಜನೆ ಆದೇಶ ರದ್ದುಪಡಿಸುವುದನ್ನ ತಡೆಹಿಡಿಯಿರಿ…ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದಿಂದ ಮನವಿ…
ಬೆಂಗಳೂರು,ಜು19,Tv10 ಕನ್ನಡ
ನಿಯೋಜನೆ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳ,ಕಂದಾಯ ಇಲಾಖೆ ಇತರೆ ಅಧಿಕಾರಿಗಳ ಹಾಗೂ ನೌಕರರ ನಿಯೋಜನೆ ಆದೇಶ ರದ್ದುಪಡಿಸಿ ಮೂಲ ಸ್ಥಾನಕ್ಕೆ ವರದಿ ಮಾಡಿಕೊಳ್ಳಲು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿರುವ ಆದೇಶವನ್ನ ತಡೆಹಿಡಿಯುವಂತೆ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.ಸಂಘದ ವತಿಯಿಂದ ಅಧ್ಯಕ್ಷರಾದ ದೊಡ್ಡಬಸಪ್ಪ ರೆಡ್ಡಿ ರವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.ಈಗಾಗಲೇ ಸರ್ಕಾರದ 16A ರದ್ದಾಗಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ನೌಕರರಿಗೆ ಅಂತರ ಜಿಲ್ಲಾ ವರ್ಗಾವಣೆ ಹೋಗಲು ಅವಕಾಶ ಇರುವುದಿಲ್ಲ ಹೀಗಾಗಿ ಪ್ರಸ್ತುತ ಇರುವ ನಿಯೋಜನೆ ಆದೇಶ ರದ್ದುಪಡಿಸಿದಲ್ಲಿ ನೌಕರರು ಹಾಗೂ ಅಧಿಕಾರಿಗಳ ಕುಟುಂಬದ ಮೇಲೆ ದುಷ್ಪರಿಣಾಮ ಬೀರಿ ಮಾನಸಿಕವಾಗಿ ಜರ್ಜರಿತರಾಗುತ್ತಾರೆ.ಹೀಗಾಗಿ ಕೂಡಲೇ ನಿಯೋಜನೆ ಆದೇಶ ರದ್ದುಪಡಿಸುವುದಕ್ಕೆ ತಡೆಹಾಕುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದೇಶ ರದ್ದುಪಡಿಸಿದಲ್ಲಿ ತಂದೆ ತಾಯಿ ಆರೋಗ್ಯ ನೋಡಿಕೊಳ್ಳುವುದು,ಪತಿ ಪತ್ನಿ ನೌಕರರಾಗಿರುವ ಪ್ರಕರಣದಲ್ಲಿ ಒಂದೇ ಕಡೆ ಜೀವಿಸುವುದು ಮಕ್ಕಳ ವಿಧ್ಯಾಭ್ಯಾಸ ಮಾಡಿಸುವುದು,ಅನಾರೋಗ್ಯ ನೌಕರರು ಆರೋಗ್ಯ ಕಾಪಾಡಿಕೊಳ್ಳುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಕುಟುಂಬದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ…