ಜಿಂಕೆ ಮಾಂಸ ಸುಲಿದ ಪ್ರಕರಣ…7 ತಿಂಗಳಾದರೂ ಚೆಳ್ಳೆಹಣ್ಣು ತಿನ್ನಿಸುತ್ತಿರುವ ಆರೋಪಿಗಳು…ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶೇಮ್..ಶೇಮ್…
- TV10 Kannada Exclusive
- July 20, 2023
- No Comment
- 60
ಜಿಂಕೆ ಮಾಂಸ ಸುಲಿದ ಪ್ರಕರಣ…7 ತಿಂಗಳಾದರೂ ಚೆಳ್ಳೆಹಣ್ಣು ತಿನ್ನಿಸುತ್ತಿರುವ ಆರೋಪಿಗಳು…ಅರಣ್ಯ ಇಲಾಖೆ ಅಧಿಕಾರಿಗಳಿಗೆ ಶೇಮ್..ಶೇಮ್…
ನಂಜನಗೂಡು,ಜು20,Tv10 ಕನ್ನಡ
ನಂಜನಗೂಡು ತಾಲೂಕು ದೊಡ್ಡಕವಲಂದೆ ಅರಣ್ಯ ಪ್ರದೇಶದಲ್ಲಿ ಜಿಂಕೆ ಮಾಂಸ ಸುಲಿದ ಆರೋಪಿಗಳನ್ನ 7 ತಿಂಗಳಾದರೂ ಪತ್ತೆ ಹಚ್ಚುವಲ್ಲಿ ಅರಣ್ಯಾಧಿಕಾರಿಗಳು ವಿಫಲರಾಗಿದ್ದಾರೆ.18-02-2023 ರಲ್ಲಿ ಪ್ರಕರಣ ದಾಖಲಾಗಿತ್ತು.ರಾತ್ರಿ ಗಸ್ತು ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ್ದರು.ಇಲಾಖೆಯ ವಾಹನ ಕಂಡ ತಕ್ಷಣ ಆರೋಪಿಗಳು ಎಸ್ಕೇಪ್ ಆಗಿದ್ದರು.ಸ್ಥಳದಲ್ಲಿ ಚರ್ಮ ಸುಲಿದ ಜಿಂಕೆ ಕಳೇಬರ,ಮಹೀಂದ್ರ ಜೀಪ್,ಚರ್ಮ ಸುಲಿಯಲು ಬಳಸಿದ ಆಯುಧಗಳನ್ನ ವಶಪಡಿಸಿಕೊಳ್ಳಲಾಗಿತ್ತು.ಪ್ರಕರಣ ನಡೆದು 7 ತಿಂಗಳು ಪೂರ್ಣಗೊಂಡಿದ್ದರೂ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲರಾಗಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.ದಾಖಲೆಗಳ ಪ್ರಕಾರ ಆರೋಪಿಯನ್ನ ಕೇರಳ ರಾಜ್ಯದ ಪಾಲಕ್ಕಾಡ್ ನ ನಿವಾಸಿ ರಾಜೇಶ್ ಹಾಗೂ ಇತರರು ಎಂದು ನಮೂದಿಸಲಾಗಿದೆ.ಪ್ರಮುಖ ಆರೋಪಿಯ ವಿಳಾಸ ಹಾಗೂ ಹೆಸರು ಪತ್ತೆಯಾಗಿದ್ದರೂ ಬಂಧಿಸಲು ಮೀನಾಮೇಷ ಎಣಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಮೂಡಿದೆ.ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಯನ್ನ ಪತ್ತೆಹಚ್ಚಿ ಬಂಧಿಸುವರೇ…?