Tv10 ಕನ್ನಡ ವರದಿ ಎಫೆಕ್ಟ್…ನಗರಸಭಾ ಕಚೇರಿ ಕುರ್ಚಿಗಳು ಬದಲು…ಗೊಬ್ಬೆದ್ದು ನಾರುತ್ತಿದ್ದ ಚೇರ್ ಗಳಿಗೆ ಮುಕ್ತಿ…
- TV10 Kannada Exclusive
- July 23, 2023
- No Comment
- 75
ನಂಜನಗೂಡು,ಜು23,Tv10 ಕನ್ನಡ
ಕೊನೆಗೂ ನಂಜನಗೂಡು ನಗರಸಭಾ ಕಚೇರಿ ಅಧಿಕಾರಿಗಳು ಮೈ ಕೊಡವಿ ಎದ್ದುನಿಂತಿದ್ದಾರೆ.ಗೊಬ್ಬೆದ್ದು ನಾರುತ್ತಿದ್ದ ಕಚೇರಿ ಕುರ್ಚಿಗಳಿಗೆ ಮುಕ್ತಿ ನೀಡಿದ್ದಾರೆ.ರಾತ್ರೋ ರಾತ್ರಿ ಹೊಸ ಕುರ್ಚಿಗಳನ್ನ ಅಳವಡಿಸಲಾಗಿದೆ.ಸಾರ್ವಜನಿಕರಿಗೆ ಕುಳಿತುಕೊಳ್ಳಲು ಮುಜುಗರವಾಗುತ್ತಿದ್ದ ಚೇರ್ ಗಳ ಬದಲು ಹೊಸ ಕುರ್ಚಿಗಳನ್ನ ಹಾಕಲಾಗಿದೆ.ಇದು Tv10 ಕನ್ನಡ ವರದಿಯ ಫಲಶೃತಿ.
ನಂಜನಗೂಡು ನಗರಸಭಾ ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಾರ್ವಜನಿಕರ ಬಳಕೆಯ ಆಸನಗಳು ಗೊಬ್ಬೆದ್ದು ನಾರುತ್ತಿದ್ದವು. ಕುರ್ಚಿಯಲ್ಲಿ ಕುಳಿತುಕೊಳ್ಳಲು ಅಸಹ್ಯಪಡುತ್ತಿದ್ದರು.ಪ್ರತಿವರ್ಷ ಪೀಠೋಪಕರಣಗಳ ಬದಲಾವಣೆಗಾಗಿ ಆಯವ್ಯಯದಲ್ಲಿ ಲಕ್ಷಾಂತರ ರೂ ಮೀಸಲಿಟ್ಟರೂ ಕುರ್ಚಿಗಳು ಮಾತ್ರ ಬದಲಾಗಿರಲಿಲ್ಲ.ನೂತನ ಶಾಸಕ ದರ್ಶನ್ ಧೃವನಾರಾಯಣ್ ಸಹ ಕುರ್ಚಿಗಳನ್ನ ಬದಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ತಲೆ ಕೆಡಿಸಿಕೊಂಡಿರಲಿಲ್ಲ.ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ Tv10 ಕನ್ನಡ ಎರಡು ದಿನಗಳ ಹಿಂದೆ ವರದಿ ಮಾಡಿತ್ತು.ವರದಿಗೆ ಎಚ್ಚೆತ್ತ ನಗರಸಭಾ ಆಯುಕ್ತ ನಂಜುಂಡಸ್ವಾಮಿ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ ರವರು ರಾತ್ರೋ ರಾತ್ರಿ ಕುರ್ಚಿಗಳನ್ನ ಬದಲಿಸಿದ್ದಾರೆ.ಶಾಸಕ ದರ್ಶನ್ ಧೃವನಾರಾಯಣ್ ಹಾಗೂ ಜಿಲ್ಲಾಧಿಕಾರಿ ರಾಜೇಂದ್ರ ರವರ ಖಡಕ್ ಸೂಚನೆಗೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ ಇದು Tv10 ಕನ್ನಡ ವರದಿ ಇಂಪ್ಯಾಕ್ಟ್…