ತ್ಯಾಜ್ಯ ತೆರವಿಗೆ ಮುಂದಾದ ನಂಜನಗೂಡು ನಗರಸಭಾ ಅಧಿಕಾರಿಗಳು…Tv10 ಕನ್ನಡ ಸುದ್ದಿ ಇಂಪ್ಯಾಕ್ಟ್…
- TV10 Kannada Exclusive
- July 22, 2023
- No Comment
- 79
ನಂಜನಗೂಡು,ಜು22,Tv10 ಕನ್ನಡ
Tv10 ಕನ್ನಡ ವಾಹಿನಿ ಸುದ್ದಿಗೆ ನಂಜನಗೂಡು ನಗರಸಭಾ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ಕಪಿಲೆ ಒಡಲನ್ನ ಸೇರುತ್ತಿರುವ ತ್ಯಾಜ್ಯ ತೆರುವುಗೊಳಿಸಲು ಮುಂದಾಗಿದ್ದಾರೆ.ಜೆಸಿಬಿ ಯಂತ್ರದ ಮೂಲಕ ಸಮರೋಪಾದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದೆ.ಇದು Tv10 ಕನ್ನಡ ವರದಿ ಫಲಶೃತಿ
ಹುಲ್ಲಹಳ್ಳಿ ರಾಂಪುರ ನಾಲೆ ಬರಿದಾಗಿದೆ ಇಲ್ಲಿಂದ ಶ್ರೀಕಂಠೇಶ್ವರನ ದೇವಸ್ಥಾನದ ಸಮೀಪದಲ್ಲಿ ಹರಿಯುವ ಗುಂಡ್ಲಾ ನದಿಗೆ ಸಂಪರ್ಕ ಪಡೆದು ಕಪಿಲಾ ನದಿಗೆ ನೀರು ಸೇರುತ್ತದೆ.ನಾಲೆಯಲ್ಲಿ ನೀರಿಲ್ಲದ ಕಾರಣ ತ್ಯಾಜ್ಯ ತುಂಬಿಹೋಗಿದೆ.ಇಲ್ಲಿಂದ ಹರಿಯುವ ಒಳಚರಂಡಿ ನೀರು ತುಂಬಿ ಕಪಿಲಾ ನದಿಯ ಒಡಲು ಸೇರುತ್ತಿದೆ.ಪಾಪ ಕಳೆಯಲು ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರಿಗೆ ಉಚಿತ ಖಾಯಿಲೆ ಹರಡುತ್ತಿರುವ ಬಗ್ಗೆ ಇಂದು Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.ಕೂಡಲೇ ಎಚ್ಚೆತ್ತ ನಗರಸಭಾ ಅಧಿಕಾರಿಗಳು ತ್ಯಾಜ್ಯ ತೆರುವಿಗೆ ಮುಂದಾಗಿದ್ದಾರೆ.ಇಂದು ಸರ್ಕಾರಿ ರಜೆ ಇದ್ದರೂ ಮೈಕೊಡವಿ ನಿಂತ ಅಧಿಕಾರಿಗಳು ಸ್ವಚ್ಛತೆಗೆ ಮುಂದಾಗಿದ್ದಾರೆ.ಇದು Tv10 ಇಂಪ್ಯಾಕ್ಟ್…