VTU ಕಾಲೇಜ್ ಕಾರ್ ಡ್ರೈವರ್ ಆತ್ಮಹತ್ಯೆ…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…
- TV10 Kannada Exclusive
- July 23, 2023
- No Comment
- 49
ಮೈಸೂರು,ಜು23,Tv10 ಕನ್ನಡ
ಮೈಸೂರಿನ ಸಾತಗಳ್ಳಿ ಬಡಾವಣೆಯಲ್ಲಿರುವ VTU ಕಾಲೇಜಿನ ಕಾರ್ ಡ್ರೈವರ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಯಾದಗಿರಿ ಜಿಲ್ಲೆ ನಿವಾಸಿ ಮಾನಪ್ಪ(27) ಮೃತ ದುರ್ದೈವಿ.ಕಳೆದ ಐದಾರು ವರ್ಷಗಳಿಂದ ಕಾಲೇಜಿನ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಮಾನಪ್ಪನಿಗೆ ತಂಗಲು ಕ್ಯಾಂಪಸ್ ನ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು.ಕೊಠಡಿಯಲ್ಲೇ ಮಾನಪ್ಪ ನೇಣಿಗೆ ಶರಣಾಗಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…