ಮೈಸೂರ್ ಪಾಕ್ ಗರ ಜಾಗತಿಕ ಮನ್ನಣೆ…ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ವಿತರಿಸಿ ಸಂಭ್ರಮಾಚರಣೆ…
- MysoreTV10 Kannada Exclusive
- July 25, 2023
- No Comment
- 67
ಮೈಸೂರ್ ಪಾಕ್ ಗರ ಜಾಗತಿಕ ಮನ್ನಣೆ…ಚಾಮುಂಡಿಬೆಟ್ಟದಲ್ಲಿ ಮೈಸೂರು ಪಾಕ್ ವಿತರಿಸಿ ಸಂಭ್ರಮಾಚರಣೆ…
ಮೈಸೂರು,ಜು25,Tv10 ಕನ್ನಡ
ಮೈಸೂರು ಪಾಕ್ ಗೆ ದೊರೆತ ಜಾಗತಿಕ ಮನ್ನಣೆಯನ್ನ ಸ್ವಾಗತಿಸಿ ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಿಸಿ ಸಂಭ್ರಮಿಸಲಾಯಿತು.
ಮೈಸೂರು ಅರಸರ ಕಾಲದಲ್ಲಿ ತಯಾರಾಗಿದ ಮೈಸೂರು ಪಾಕ್ ಖ್ಯಾತಿ ಗಳಿಸಿರುವ ಹಿನ್ನಲೆಯಲ್ಲಿ ಅಪೂರ್ವ ಸ್ನೇಹ ಬಳಗದ ವತಿಯಿಂದ ಪ್ರವಾಸಿಗರಿಗೆ ಹಾಗೂ ಭಕ್ತಾದಿಗಳಿಗೆ ಮೈಸೂರು ಪಾಕ್ ವಿತರಿಸಿ ಮೈಸೂರು ಪಾಕ್ ಮಹತ್ವ ಹಾಗೂ ಅದರ ಇತಿಹಾಸ ತಿಳಿಸಲಾಯಿತು. ಮಾಜಿನಗರ ಪಾಲಿಕಾ ಸದಸ್ಯ ಎಂ ಡಿ
ಪಾರ್ಥಸಾರಥಿ ಮಾತನಾಡಿ
ಕರ್ನಾಟಕದ ಜನಪ್ರಿಯ ಸಿಹಿತಿನಿಸಾಗಿರುವ ಮೈಸೂರ್ ಪಾಕ್ ನ ರುಚಿಯನ್ನು ಸವಿಯದವರೇ ವಿರಾಳ ಎನ್ನಬೇಕು. ವಿಶ್ವದ ಸಿಹಿತಿನಿಸುಗಳ ಪಟ್ಟಿಯಲ್ಲಿ ನಮ್ಮ ಮೈಸೂರ್‌ಪಾಕ್‌ಗೆ 14ನೇ ಸ್ಥಾನ ದಕ್ಕಿರುವುದು ಕರ್ನಾಟಕ ಪಾಲಿಗೆ ಹೆಮ್ಮೆಯ ವಿಷಯವೇ ಸರಿ.ಮೈಸೂರುಪಾಕ್‌ಗೆ 90 ವರ್ಷಗಳ ಇತಿಹಾಸವಿದೆ. ಈ ಖಾದ್ಯವನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಮೈಸೂರು ಅರಮನೆಯ ಬಾಣಸಿಗ ಮಾದಪ್ಪ ಅವರಿಗೆ ಸಲ್ಲಬೇಕು. ಆಗಿನ ಮೈಸೂರಿನ ಮಹಾರಾಜ ಕೃಷ್ಣರಾಜ ಒಡೆಯರ್‌ರವರ ಅಂದಿನ ಊಟಕ್ಕೆ ಸಿಹಿಯಿಲ್ಲದಿದ್ದುದನ್ನು ಗಮನಿಸಿದ ಮಾದಪ್ಪ, ಕಡಲೇಹಿಟ್ಟು, ತುಪ್ಪ, ಸಕ್ಕರೆಗಳ ಹದವಾದ ಮಿಶ್ರಣವನ್ನು ಬಳಸಿ ತಯಾರಿಸಿದ ಸಿಹಿತಿಂಡಿಯೇ ಮೈಸೂರ್‌ಪಾಕ್!
ವಿಶ್ವದ ಅಗ್ರಗಣ್ಯ ಸಿಹಿತಿಂಡಿಗಳಲ್ಲಿ ಪ್ರಸ್ತುತ 14ನೇ ಸ್ಥಾನ ಗಳಿಸಿರುವ ನಮ್ಮೆಲ್ಲರ ಹೆಮ್ಮೆಯ ಮೈಸೂರ್‌ಪಾಕ್ ಮೊದಲ ಸ್ಥಾನಕ್ಕೆ ಬರುವಂತಾಗಲಿ ಎಂದು ಆಶಿಸೋಣ ಎಂದರು.
ಈ ಸಂದರ್ಭದಲ್ಲಿ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾಕ್ಟರ್ ಶಶಿಶೇಖರ ದೀಕ್ಷಿತ್, ಜಗದೀಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಸುರೇಶ್, ಸಾಮಾಜಿಕ ಚಿಂತಕರಾದ ದೂರ ರಾಜಣ್ಣ, ಆನಂದ್ ದಯಾನಂದ, ಆದರ್ಶ್, ಅಮರ್ ಬಾಬು, ಹಾಗೂ ಇನ್ನಿತರರು ಹಾಜರಿದ್ದರು..