ಚುನಾವಣೆ ಗೌರವ ಧನಕ್ಕೆ ಕೊಕ್…3 ವರ್ಷಗಳಿಂದ ಅಲೆಯುತ್ತಿರುವ ಸಿಬ್ಬಂದಿ…ಚುನಾವಣಾಅಧಿಕಾರಿ ಪತ್ರಕ್ಕೂ ಡೋಂಟ್ ಕೇರ್…
- TV10 Kannada Exclusive
- July 31, 2023
- No Comment
- 145

ಮೈಸೂರು,ಜು30,Tv10 ಕನ್ನಡ
ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೊಬ್ಬರಿಗೆ ಗೌರವ ಧನ ನೀಡದೆ ಕಚೇರಿಗಳಿಗೆ ಅಲೆದಾಡಿಸುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಚುನಾವಣೆ ಮುಗಿದು ಮೂರು ವರ್ಷ ಕಳೆದರೂ ಗೌರವ ಧನ ನೀಡದೆ ಸತಾಯಿಸುತ್ತಿರುವ ತಹಸೀಲ್ದಾರ್ ಗೆ ಜಿಲ್ಲಾಧಿಕಾರಿ ಪತ್ರ ಬರೆದು ಸೂಚನೆ ನೀಡಿದ್ದರೂ ಡೋಂಟ್ ಕೇರ್ ಎಂದಿದ್ದಾರೆ.ಚುನಾವಣಾ ಆಯೋಗದ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ಸೂಚನೆ ನೀಡಿದ್ದರೂ ಕ್ಯಾರೆ ಎನ್ನುತ್ತಿಲ್ಲ ತಹಸೀಲ್ದಾರ್.ಚುನಾವಣಾ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಕಳೆದ ಮೂರು ವರ್ಷಗಳಿಂದ ಪತ್ರಗಳ ಮೇಲೆ ಪತ್ರಗಳು ಬರೆದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.ಇದು ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ನೀಡುವ ಕಿರಿಕಿರಿಗೆ ಸ್ಪಷ್ಟ ಉದಾಹರಣೆಯಾಗಿದೆ.
ಟಿ.ನರಸೀಪುರ ತಾಲೂಕು ಹೆಗ್ಗೂರು ಗ್ರಾಮ ಪಂಚಾಯ್ತಿಗೆ 2020 ರಲ್ಲಿ ಚುನಾವಣೆ ನಡೆದಿತ್ತು.ಚುನಾವಣಾಧಿರಿಯಾಗಿ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕರಾದ ಮಹದೇವಸ್ವಾಮಿ ರವರು ಕರ್ತವ್ಯ ನಿರ್ವಹಿಸಿದ್ದರು.ಸರ್ಕಾರದ ನಿಯಮದಂತೆ ಗೌರವ ಧನ ನೀಡಬೇಕು.ಆದರೆ ಚುನಾವಣಾ ಪ್ರಕ್ರಿಯೆ ಮುಗಿದು ಮೂರು ವರ್ಷ ಕಳೆದರೂ ಮಹದೇವಸ್ವಾಮಿ ರವರಿಗೆ ಗೌರವ ಧನ ನೀಡಿಲ್ಲ.ಈ ಕುರಿತಂತೆ ಮಹದೇವಸ್ವಾಮಿ ರವರು ಟಿ.ನರಸೀಪುರ ತಹಸೀಲ್ದಾರ್ ರವರಿಗೆ ಹಲವು ಪತ್ರಗಳ ಮೂಲಕ ಮನವಿ ಮಾಡಿದ್ದಾರೆ.ನಂತರ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.ಇದ್ಯಾವುದಕ್ಕೂ ಕೇರ್ ಮಾಡದ ತಹಸೀಲ್ದಾರ್ ಗೌರವ ಧನ ನೀಡುವಲ್ಲಿ ನಿರ್ಲಕ್ಷಿಸಿದ್ದಾರೆ.ಪಟ್ಟು ಬಿಡದ ಮಹದೇವಸ್ವಾಮಿ ರವರು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳಿಗೂ ಪತ್ರ ಬರೆದಿದ್ದಾರೆ.ಆಯೋಗದ ಕಾರ್ಯದರ್ಶಿ ಹೊನ್ನಂಭ ರವರು ಮೈಸೂರು ಜಿಲ್ಲಾಧಿಕಾರಿ ಡಿ ರಾಜೇಂದ್ರ ರವರಿಗೆ ಪತ್ರ ಬರೆದು ಕ್ರಮ ವಹಿಸುವಂತೆ ಸೂಚನೆ ನೀಡಿದ್ದಾರೆ.ಜಿಲ್ಲಾಧಿಕಾರಿಗಳೂ ಸಹ ತಹಸೀಲ್ದಾರ್ ಗೆ ಪತ್ರ ಬರೆದು ಗೌರವ ಧನ ಪಾವತಿಸುವಂತೆ ಸೂಚನೆ ನೀಡಿದ್ದಾರೆ.ಇಷ್ಟೆಲ್ಲಾ ಬೆಳವಣಿಗೆ ಆದ್ರೂ ತಹಸೀಲ್ದಾರ್ ಡೋಂಟ್ ಕೇರ್ ಎಂದು ಉಡಾಫೆಯಿಂದ ವರ್ತಿಸುತ್ತಿದ್ದಾರೆ.ಮಹದೇವಸ್ವಾಮಿ ರವರಿಗೆ ಗೌರವ ಧನ ನೀಡಲು ಅಡ್ಡಿಯಾದ ಕಾರಣವಾದರೂ ಏನು ಎಂಬ ಪ್ರಶ್ನೆ ಉದ್ಭವಿಸಿದೆ.ಚುನಾವಣಾ ಕರ್ತವ್ಯದ ಗೌರವ ಧನ ನೀಡಲು ಮೀನಾಮೇಷ ಎಣಿಸುತ್ತಿರುವ ತಹಸೀಲ್ದಾರ್ ಗೆ ಜಿಲ್ಲಾಧಿಕಾರಿಗಳು ಬುದ್ದಿ ಹೇಳಬೇಕಿದೆ.ಅಲ್ಲದೆ ಇಂತಹ ಮತ್ತಷ್ಟು ಪ್ರಕರಣಗಳು ಇರುವುದೇ ಎಂಬ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ…