ಅಯೋಧ್ಯ ರಾಮಮಂದಿರ ಕಟ್ಟಡ ಕಾಮಗಾರಿ…ಮುಸ್ಲಿಂ ಗುತ್ತಿಗೆದಾರರ ಕೈಬಿಡಿ…ಪ್ರಮೋದ್ ಮುತಾಲಿಕ್ ಮನವಿ…
- Temples
- August 1, 2023
- No Comment
- 102
ಮೈಸೂರು,ಆ1,Tv10 ಕನ್ನಡ
ಶ್ರೀ ರಾಮಚಂದ್ರನ ಜನ್ಮಸ್ಥಳ ಅಯೋಧ್ಯೆ ಮಹಾನಗರಿಯಲ್ಲಿ ಭವ್ಯವಾಗಿ ಮರು ನಿರ್ಮಾಣವಾಗುತ್ತಿರುವ ರಾಮ ಮಂದಿರದ ಕಟ್ಟಡದ ಕೆಲಸಕ್ಕೆ ನೇಮಿಸಿರುವ ಮುಸ್ಲಿಂ ಗುತ್ತಿಗೆದಾರರನ್ನು ಹಾಗೂ ಮುಸ್ಲಿಂ ಕೆಲಸಗಾರರನ್ನು ಕೈಬಿಡುವಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.ಬಗ್ಗೆ ಮನವಿ ಶ್ರೀರಾಮ ಜನ್ಮಸ್ಥಳ ರಾಮಮಂದಿರ ನಿರ್ಮಾಣ ಟ್ರಸ್ಟ್ ನ ಸದಸ್ಯರೂ ಹಾಗೂ ಪೇಜಾವರ ಮಠದ ಪೀಠಾಧಿಪತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರವರಿಗೆ ಎರಡು ಪುಟಗಳ ಮನವಿ ಪತ್ರ ಸಲ್ಲಿಸಿದ್ದಾರೆ.
500 ವರ್ಷಗಳ ಹೋರಾಟದ ನಂತರ ಪವಿತ್ರಸ್ಥಳವನ್ನ ಪಡೆಯಲಾಗಿದೆ.ಪುನರ್ ನಿರ್ಮಾಣ ಕಾರ್ಯ ಆರಂಭವಾಗಿದೆ.ಗರ್ಭಗುಡಿ ನಿರ್ಮಾಣದ ಜವಾಬ್ದಾರಿಯನ್ನ ಮುಸ್ಲಿಂ ಗುತ್ತಿಗೆದಾರರಿಗೆ ನೀಡಿ ಅಪವಿತ್ರಗೊಳಿಸಲಾಗಿದೆ ಎಂದು ಆರೋಪಿಸಿದ ಪ್ರಮೋದ್ ಮುತಾಲಿಕ್ ಕೂಡಲೇ ಮುಸ್ಲಿಂ ಗುತ್ತಿಗೆದಾರರು ಹಾಗೂ ಮುಸ್ಲಿಂ ಕೆಲಸಗಾರರನ್ನ ಕೈಬಿಡಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ, ಬೆಂಗಳೂರು ಮಹಾನಗರ ಅಧ್ಯಕ್ಷರಾದ ಎಸ್. ಭಾಸ್ಕರ್, ದಕ್ಷಿಣ ವಿಭಾಗದ ಅಧ್ಯಕ್ಷರಾದ ಅಮರ್ ನಾಥ್ ವೈಡಿ, ಮೈಸೂರು ಅಧ್ಯಕ್ಷರಾದ ಸಂಜಯ್, ಹಿಂದೂ ಪರ ಕಾರ್ಯಕರ್ತರಾದ ರಾಕೇಶ್ ಭಟ್, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜಗದೀಶ್ ಹೆಬ್ಬಾರ್, ಮಧು ಶಂಕರ್, ಜೀವನ್ ಕುಮಾರ್, ಲೋಹಿತ್ ಇನ್ನಿತರರು ಹಾಜರಿದ್ದರು…