ವಿ.ವಿ.ಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಅಂತರರಾಜ್ಯ ಕಾರು ಕಳ್ಳನ ಬಂಧನ…1.19 ಕೋಟಿ ಮೌಲ್ಯದ ಕಾರು ಹಾಗೂ ಚಿನ್ನಾಭರಣಗಳು ವಶ…

ಮೈಸೂರು,ಆ2,Tv10 ಕನ್ನಡ

ವಿವಿ ಪುರಂ ಠಾಣಾ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಅಂತರಾಜ್ಯ ಕಾರು ಕಳ್ಳ ಸಿಕ್ಕಿಬಿದ್ದಿದ್ದಾನೆ.ಬಂಧಿತನಿಂದ 6 ಕಾರು 750 ಗ್ರಾಂ ಚಿನ್ನಾಭರಣ,3 ವಾಚ್ ಗಳು,ಹೆಡ್ ಫೋನ್ ವಶಪಡಿಸಿಕೊಳ್ಳಲಾಗಿದೆ.ಒಟ್ಟು 1,19,61,706/- ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಳ್ಳಲಾಗಿದೆ.ಆಂಧ್ರ ರಾಜ್ಯದ ಸತ್ತಿಬಾಬು.ಆ.ಸತೀಶ್ ರೆಡ್ಡಿ ಬಂಧಿತ ಆರೋಪಿ.

ಐಶಾರಾಮಿ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದ ಸತ್ತಿಬಾಬು ಕಿಟಕಿ ಸರಳುಗಳನ್ನ ಮುರಿದು ಕಾರುಗಳ ಕೀ ತೆಗೆದುಕೊಂಡು ಕಳುವು ಮಾಡುತ್ತಿದ್ದ.ನಂತರ ಲೀಲಾಜಾಲವಾಗಿ ಮನೆ ಪ್ರವೇಶಿಸಿ ಚಿನ್ನಾಭರಣಗಳನ್ನ ದೋಚಿ ಪರಾರಿಯಾಗುತ್ತಿದ್ದ

ಇತ್ತೀಚೆಗೆ ನಡೆದ ಕಾರು ಕಳುವು ಪ್ರಕರಣ ಭೇಧಿಸಲು ಹೊರಟ ವಿವಿ ಪುರಂ ಠಾಣೆ ಪೊಲೀಸರಿಗೆ ಸತ್ತಿಬಾಬು ಸಿಕ್ಕಿಬಿದ್ದಿದ್ದಾನೆ.ಈತನ ಬಂಧನದಿಂದ ವಿವಿ ಪುರಂ ಠಾಣೆಯ ಮೂರು ಪ್ರಕರಣಗಳು ಹಾಗೂ ವಿಜಯನಗರ ಪೊಲೀಸ್ ಠಾಣೆಯ ಎರಡು ಪ್ರಕರಣಗಳು ಪತ್ತೆಯಾದಂತಾಗಿದೆ

ಸಂಚಾರ ಮತ್ತು ಅಪರಾಧ ಡಿಸಿಪಿ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಹಾಗೂ ಎನ್.ಆರ್.ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್ ಉಸ್ತುವಾರಿಯಲ್ಲಿ ವಿವಿ ಪುರಂ ಠಾಣೆಯ ಇನ್ಸ್ಪೆಕ್ಟರ್ ಮೋಹನ್ ಕುಮಾರ್ ನೇತೃತ್ವದಲ್ಲಿ ಪಿಎಸ್ಸೈಗಳಾದ ಲೇಪಾಕ್ಷ,ಮೋಹನ್ ಹಾಗೂ ಸಿಬ್ಬಂದಿಗಳಾದ ಪ್ರಸನ್ನ,ಸುರೇಶ್,ರವಿಗೌಡ,ಚೆಲುವರಾಜು,ಸುನಿಲ್ ಕಾಂಬಳೆ,ಈರಣ್ಣ,ಉಮೇಶ್,ಹರೀಶ್,ಚಾಮುಂಡಮ್ಮ,ಕುಮಾರ್ ರವರು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜ್ ಕಾರ್ಯಾಚರಣೆಯನ್ನ ಪ್ರಶಂಸಿಸಿದ್ದಾರೆ…

ಬಿ ಸತೀಶ್ ರಾವ್ ರವರು ತಮ್ಮ ಕಾರು ಕಳ್ಳತನವಾಗಿರುವ ಬಗ್ಗೆ ನೀಡಿರುವ ದೂರಿನ ಅನ್ವಯ ದಿನಾಂಕ: 25/07/2023 ರಂದು ರಾತ್ರಿ ಸುಮಾರು 09-00 ಗಂಟೆಯಲ್ಲಿ ತನ್ನ ಬಾಬು ಮಹೇಂದ್ರ XUV 700 ಕಾರ್ ನಂ: KA-09, MG-2677 ಅನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ಲಿಖಿತ ದೂರನ್ನು ಸ್ವೀಕರಿಸಿಕೊಂಡು ಠಾಣಾಗೆ ನೀಡಿದ್ದರು

ಠಾಣಾ ಸರಹದ್ದಿನಲ್ಲಿ ಮೇಲ್ಕಂಡ ಪ್ರಕರಣದ ಆರೋಪಿ ಪತ್ತೆಗಾಗಿ ಗಸ್ತಿನಲ್ಲಿರುವಾಗ ದಿ:-30-07-2023 ರಂದು ಬಾತ್ಮಿದಾರರು ಕರೆ ಮಾಡಿ ತಿಳಿಸಿದ ಮಾಹಿತಿ ಯಾದವಗಿರಿಯ ಚರ್ಚ್ ಬಳಿ, ಒಬ್ಬ ವ್ಯಕ್ತಿ, ಅನುಮಾನಾಸ್ಪದವಾಗಿ ಓಡಾಡುತ್ತಿರುವುದಾಗಿ ತಿಳಿಸಿದ ಮೇರೆಗೆ, ಕೂಡಲೇ ನಾವುಗಳು ಸದರಿ ಸ್ಥಳಕ್ಕೆ ಮದಾಹ್ನ 3-30 ಗಂಟೆಗೆ ಹೋಗಿ ನೋಡಲಾಗಿ ಆ ಸ್ಥಳದಲ್ಲಿ ಇದ್ದ ವ್ಯಕ್ತಿ ನಮ್ಮಗಳನ್ನು ಕಂಡು ತಲೆಮರೆಸಿಕೊಂಡು ಓಡಲು ಪ್ರಯತ್ನಿಸಿದ ವ್ಯಕ್ತಿಯನ್ನು ನಾವುಗಳು ಸುತ್ತುವರೆದು ಹಿಡಿದುಕೊಂಡು ಆತನ ಹೆಸರು ವಿಳಾಸ ಕೇಳಲಾಗಿ ಸಬಾಬು @ ಸತೀಶ್ ರೆಡ್ಡಿ, ತಂದೆ ಅಪ್ಸರಾವ್, 35 ವರ್ಷ, ರಿಯಲ್ ಎಸ್ಟೇಟ್ ಕೆಲಸ, # 305, ಶ್ರೀ ಸಾಯಿಲೀಲಾ ರಿವರ್ ವೀವ್ ಅಪಾರ್ಟ್ ಮೆಂಟ್, ಚಿತ್ರಾವತಿ ರೋಡ್, ಪುಟ್ಟಪರ್ತಿ, ಆಂದ್ರ ಪ್ರದೇಶ ರಾಜ್ಯ ಎಂದು ತೆಲುಗು ಭಾಷೆಯಲ್ಲಿ ತಿಳಿಸಿರುತ್ತಾನೆ. ಸದರಿ ವ್ಯಕ್ತಿಯನ್ನು ಠಾಣೆಗೆ ಕರೆತಂದು ವಿಚಾರ ಮಾಡಲಾಗಿ ಆರೋಪಿತನಿಂದ

1) ವಿ.ವಿ.ಪುರಂ ಪೊಲೀಸ್ ಠಾಣೆಯ ಮೊನಂ -26/2023 ಕಲಂ:-457-380 ಐಪಿಸಿ ಈ ಪ್ರಕರಣದಲ್ಲಿ 03 ಬೀಟ್, ಓಮೇಗಾ, ಪನೇರಾಯ್ ವಾಚ್ ಗಳು 01 ಬೋಸ್ ಕಂಪನಿಯ ಹೆಡ್ ಫೋನ್

2) ವಿ.ವಿ.ಪುರಂ ಪೊಲೀಸ್ ಠಾಣೆಯ ಮೊ.ನಂ:-27/2023 ಕಲಂ:-454-457-380 ಐಪಿಸಿ ಈ ಪ್ರಕರಣದಲ್ಲಿ 750 ಗ್ರಾಂ ಚಿನ್ನ ಮತ್ತು ಬೆಳ್ಳಿ, ಪದಾರ್ಥಗಳು,

3) ವಿ.ವಿ.ಪುರಂ ಪೊಲೀಸ್ ಠಾಣೆಯ ಮೊ.ನಂ-33/2023 ಕಲಂ:-379 ಐಪಿಸಿ ಈ ಪ್ರಕರಣದಲ್ಲಿ, ಮಹೇಂದ್ರ ಎಕ್ಸ್ ಯೂಪಿ-700 ಕಾರು.

4) ವಿಜಯನಗರ ಪೊಲೀಸ್ ಠಾಣೆಯ ಮೊ.ನಂ:-82/2023 ಕಲಂ:-379 ಐಪಿಸಿ ಈ ಪ್ರಕರಣದಲ್ಲಿ, ಟೊಯೋಟಾ

5) ವಿಜಯನಗರ ಪೊಲೀಸ್‌ ಠಾಣೆಯ ಮೊ.ನಂ:-82/2023 ಕಲಂ:-379 ಐಪಿಸಿ ಈ ಪ್ರಕರಣದಲ್ಲಿ, ಟೋಯೋಟಾ

ಇನ್ನೊವಾ ಕ್ರಿಸಾ ಕಾರುಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ.

ಮೇಲ್ಕಂಡ ಪ್ರಕರಣಗಳಲ್ಲಿ ವಶಪಡಿಸಕೊಂಡಿರುವ ಮಾಲಿನ ಒಟ್ಟು ಮೌಲ:-1,19,61,706/- ರೂಗಳಾಗಿರುತ್ತದೆ,

ಆರೋಪಿಯು ಅಂತರ ರಾಜ್ಯ ಕಳ್ಳನಾಗಿದ್ದು, ಒಬ್ಬನೇ ಆತ ಶ್ರೀಮಂತ ಬಡಾವಣೆಗಳನ್ನು ಆಯ್ದುಕೊಂಡು ಶ್ರೀಮಂತ ಮನೆಗಳನ್ನು ಹುಡುಕುತ್ತಾ ಸೆಡಿಂಗ್ ಕಿಟಕಿಗಳು ಇರುವ ಮನೆಗಳನ್ನು ನೋಡಿಕೊಂಡು ಕಿಟಕಿಯ ಮೂಲಕ ಬೆಲೆ ಬಾಳುವ ಕಾರುಗಳ ಕೀಗಳನ್ನು ಅತ್ಯಂತ ಸಲೀಲವಾಗಿ ತೆಗೆದುಕೊಳ್ಳುವುದು, ಮನೆಯ ಒಳಗೆ ಪ್ರವೇಶಿಸಿ ಬೆಲೆ ಬಾಳುವ ಚಿನ್ನಾಭರಣಗಳನ್ನು ಅತ್ಯಂತ ಸುರಕ್ಷತೆಯಿಂದ ಕಳ್ಳತನ ಮಾಡುವ ಹವ್ಯಾಸ ವುಳ್ಳವನಾಗಿರುತ್ತಾನೆ.

ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಮಾನು ಉಪ ಪೊಲೀಸ್ ಆಯುಕ್ತರು, ಶ್ರೀಮತಿ ಜಾಹ್ನವಿ, ಎಸ್‌. (ಕೆ.ಎಸ್.ಪಿ.ಎಸ್) ಕೇಂದ್ರಸ್ಥಾನ, ಸಂಚಾರ ಮತ್ತು ಅಪರಾಧ ಮೈಸೂರು ನಗರ ರವರುಗಳ ಮಾರ್ಗದರ್ಶನದಲ್ಲಿ, ನರಸಿಂಹರಾಜ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಅಶ್ವಥ್ ನಾರಾಯಣ್‌ ಸಿಕೆ, ರವರ ಉಸ್ತುವಾರಿಯಲಿ, ವಿ.ವಿ. ಪುರಂ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರುರಾದ ಶ್ರೀ ಮೋಹನ್ ಕುಮಾರ್.ಎಂ. ರವರ ನೇತೃತ್ವದಲ್ಲಿ ಉಪನಿರೀಕ್ಷಕರಾದ ಶ್ರೀ ಲೇಪಾಕ್ಷ ಕೆ. ಮತ್ತು ಶ್ರೀ ಮೋಹನ್ ಕೆ.ಕೆ ಹಾಗೂ ಸಿಬ್ಬಂದಿಗಳಾದ ಪ್ರಸನ್ನ.ಎಸ್‌, ಸುರೇಶ, ಜಿ ರವಿಗೌಡ ಎಸ್, ಚೆಲುವರಾಜು ಎಸ್, ಸುನಿಲ್ ಕಾಂಬಳೆ, ಈರಣ, ಉಮೇಶ.ಬಿ, ಹರೀಶ್, ಶ್ರೀಮತಿ ಚಾಮುಂಡಮ್ಮ ಮತ್ತು ತಾಂತ್ರಿಕ ವಿಭಾಗದ ಕುಮಾರ, ಪಿ ರವರುಗಳು ಆರೋಪಿ ಮತ್ತು ಮಾಲು ಪತ್ತೆ ಮಾಡಲು ಶ್ರಮಿಸಿದ್ದು, ಈ ಪತ್ತೆ ಕಾರ್ಯಕ್ಕೆ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್.ಬಿ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ,

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *