ಗ್ರಾ.ಪಂ.ಅಧ್ಯಕ್ಷ ಚುನಾವಣೆಯಲ್ಲಿ ಹೈಡ್ರಾಮಾ…ಮತ ಹಾಕುವುದಾಗಿ ಆಣೆ ಪ್ರಮಾಣ ಮಾಡಿ ಕೈ ಕೊಟ್ಟ ಸದಸ್ಯರು…

  • Politics
  • August 3, 2023
  • No Comment
  • 184

ಸಾಲಿಗ್ರಾಮ,ಆ3,Tv10 ಕನ್ನಡ

ಸಾಲಿಗ್ರಾಮ ತಾಲೂಕು ಮೇಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆದ ಆರೋಪ ಕೇಳಿ ಬಂದಿದೆ.ಮತ ಹಾಕಲು ಪ್ರವಾಸಕ್ಕೆ ಕಳುಹಿಸಿದ್ದ ಅಭ್ಯರ್ಥಿಗೆ ಹಿನ್ನಡೆಯಾಗಿದೆ.ಅಭ್ಯರ್ಥಿಗೆ ಭರವಸೆ ನೀಡಿ ಪ್ರವಾಸ ಮಾಡಿದ ಸದಸ್ಯರು ಕೈ ಕೊಟ್ಟಿದ್ದಾರೆ.
ಪ್ರವಾಸ ಹೋಗಿ ಬಂದು ಎದುರಾಳಿ ಅಭ್ಯರ್ಥಿಗೆ ಮತ ಹಾಕಿದ್ದಾರೆಂದು ಆರೋಪ ಕೇಳಿಬಂದಿದೆ. ಹೈ ಡ್ರಾಮಾಕ್ಕೆ ಸಾಕ್ಷಿಯಾಗಿದೆ ಮೇಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚುನಾವಣೆ.ಅಧ್ಯಕ್ಷ ಸ್ಥಾನದ ಆಕಾಂಕ್ಷಿ
ಭಾರತಿ ವಿಶ್ವನಾಥ್ ಗೆ 9 ಸದಸ್ಯರು ಮೇಲೂರು ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಆಣೆ ಪ್ರಮಾಣ ಮಾಡಿ ಮತಹಾಕುವುದಾಗಿ ಗ್ಯಾರೆಂಟಿ ನೀಡಿದ್ದರು.ಇದಕ್ಕಾಗಿ ಭಾರತಿ ವಿಶ್ವನಾಥ್ ಪ್ರವಾಸ ವ್ಯವಸ್ಥೆ ಮಾಡಿದ್ದರು.ಆದ್ರೆ ಪ್ರವಾಸದ ನಂತರ ಸದಸ್ಯರು ಉಲ್ಟಾ ಹೊಡೆದರು.ಎದುರಾಳಿ
ವಿಜಯ ರಾಮಕೃಷ್ಣೇಗೌಡ ಗೆಲುವು ಸಾಧಿಸಿದ್ದಾರೆ.
ಒಟ್ಟು 15 ಸದಸ್ಯರ ಗ್ರಾಮ ಪಂಚಾಯತಿ
ಗೆಲ್ಲಲು 9 ಮತಗಳ ಅವಶ್ಯಕತೆ ಇದ್ದ ಕಾರಣ 9 ಜನರಿಗೆ ಭಾರತಿ ವಿಶ್ವನಾಥ್ ಪ್ರವಾಸ ಆಯೋಜಿಸಿದ್ದರು.9 ಸದಸ್ಯರ ಪೈಕಿ
ಮೂವರು ಅಡ್ಡ ಮತದಾನ ಮಾಡಿದ್ದಾರೆ.
ಕೇವಲ 6 ಮತ ಪಡೆದು ಭಾರತಿ ವಿಶ್ವನಾಥ್ ಸೋತಿದ್ದಾರೆ.
ಮತದಾನದ ನಂತರವೂ ಎಲ್ಲರೂ ಸಹ ಮತ್ತೆ ಆಣೆ ಪ್ರಮಾಣ ಮಾಡಿದ್ದಾರೆ.
ಗ್ರಾ.ಪಂ ಸದಸ್ಯರಾದ ಗೌತಮ್,ಲೀಲಾವತಿ, ನರೇಂದ್ರ ಕುಮಾರ್,
ಮಹದೇವಮ್ಮ, ದೀಪಿಕಾ ವೆಂಕಟೇಶ್,
ಪುಟ್ಟಸ್ವಾಮಿ ಗೌಡ, ಕುಳ್ಳಯ್ಯ, ಕುಮಾರ್‌ರಿಂದ ಆಣೆ ಹಾಕಿಸಿಕೊಂಡಿದ್ದಾರೆ.
ಹೈಡ್ರಾಮಕ್ಕೆ ಸಾಕ್ಷಿಯಾದ ಮೇಲೂರು ಗ್ರಾ.ಪಂ ಅಧ್ಯಕ್ಷರ ಚುನಾವಣೆ ಸಾಕ್ಷಿಯಾಗಿದೆ…

#tv10kannada

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *