ರಾತ್ರಿ ಗಸ್ತಿಗೆ ನಾವೂ ಸೈ…ನಾರಿಯರ ರಕ್ಷಣೆಗೆ ನಿಂತ ಮಹಿಳಾ ಪೊಲೀಸ್ ಸಿಬ್ಬಂದಿಗಳು…
- TV10 Kannada Exclusive
- August 11, 2023
- No Comment
- 257
ರಾತ್ರಿ ಗಸ್ತಿಗೆ ನಾವೂ ಸೈ…ನಾರಿಯರ ರಕ್ಷಣೆಗೆ ನಿಂತ ಮಹಿಳಾ ಪೊಲೀಸ್ ಸಿಬ್ಬಂದಿಗಳು…
ಮೈಸೂರು,ಆ11,Tv10 ಕನ್ನಡ
ರಾತ್ರಿ ಗಸ್ತಿಗೆ ಇನ್ಮುಂದು ಮಹಿಳಾ ಪೊಲೀಸ್ ಸಿಬ್ಬಂದಿಗಳೂ ಸಹ ಕಾರ್ಯನಿರ್ವಹಿಸಲಿದ್ದಾರೆ.ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಮಹಿಳೆಯರ ರಕ್ಷಣೆಗೆ ಮುಂದಾದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಕ್ಕೆ ನಾವೂ ಸೈ ಎಂದು ನಿರೂಪಿಸಿದ್ದಾರೆ.ಮೇಟಗಳ್ಳಿ ಠಾಣೆಯದ ಈ ವಿನೂತನ ಪ್ರಯೋಗ ಆರಂಭವಾಗಿದೆ.ಹತ್ತಕ್ಕೂ ಹೆಚ್ಚು ಮಹಿಳಾ ಸಿಬ್ಬಂದಿಗಳನ್ನ ರಾತ್ರಿ ಗಸ್ತಿಗೆ ನಿಯೋಜಿಸಲಾಗಿದೆ.ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ದಿವಾಕರ್ ನೇತೃತ್ವದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳ ರಾತ್ರಿ ಗಸ್ತಿನ ಕಾರ್ಯ ಆರಂಭವಾಗಿದೆ.ಸಧ್ಯ ಮೊದಲ ಹಂತದಲ್ಲಿ ಈ ಕಾರ್ಯಕ್ಕೆ ಹತ್ತು ಮಹಿಳಾ ಸಿಬ್ಬಂದಿಗಳನ್ನ ನಿಯೋಜಿಸಲಾಗಿದೆ.ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಮತ್ತಷ್ಟು ಸಂಖ್ಯೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ.ಮೃಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿದೆ.ಮಹಿಳೆಯರು ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ರಕ್ಷಣೆ ಒದಗಿಸಲು ಮೈಸೂರು ಖಾಕಿ ಪಡೆ ಆಧ್ಯತೆ ನೀಡಿದೆ.ಶಂಕಿತ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಿ ಅವರ ಸಂಪೂರ್ಣ ಮಾಹಿತಿ ಪಡೆಯುವ ಕೆಲಸ ಮಹಿಳಾ ಸಿಬ್ಬಂದಿಗಳು ರಾತ್ರಿಪಾಳಿ ಗಸ್ತಿನಲ್ಲಿ ಮಾಡುತ್ತಾರೆ.ಕೇವಲ ಪುರುಷ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದ್ದ ರಾತ್ರಿ ಗಸ್ತಿನ ಜವಾಬ್ದಾರಿಯನ್ನ ಮಹಿಳೆಯರೂ ಹೆಗಲ ಮೇಲೆ ಹೊತ್ತಿರುವ ನಡೆ ನಿಜಕ್ಕೂ ಶ್ಲಾಘನೀಯ.ಮುಂದಿನ ದಿನಗಳಲ್ಲಿ ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಈ ವ್ಯವಸ್ಥೆ ಕಾರ್ಯರೂಪಕ್ಕೆ ತರುವ ಯೋಜನೆ ಇದೆ.ಸಾಂಸ್ಕೃತಿಕ ನಗರಿಯ ನಾಗರೀಕರಿಗೆ ಒಂದಿಲ್ಲ ಒಂದು ರೀತಿಯಲ್ಲಿ ಅಭಯ ನೀಡುತ್ತಿರುವ ಮೈಸೂರು ಪೊಲೀಸರಿಗೆ ಮೆಚ್ಚುಗೆ ವ್ಯಕ್ತವಾಗಿದೆ…