ಶಾಲಾ ಕಾಲೇಜು ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಅನುಚಿತ ವರ್ತನೆಗೆ ಬ್ರೇಕ್ ಹಾಕಿ…ಶಾಸಕ ಶ್ರೀವತ್ಸ ಗೆ ಜೆ.ಪಿ.ನಗರ ನಿವಾಸಿಗಳ ಮನವಿ…
- TV10 Kannada Exclusive
- August 11, 2023
- No Comment
- 101
ಮೈಸೂರು,ಆ11,Tv10 ಕನ್ನಡ
ಶಾಲಾ ಕಾಲೇಜು ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಅನುಚಿತ ವರ್ತನೆಗೆ ಕಡಿವಾಣ ಹಾಕುವಂತೆ ಶಾಸಕ ಶ್ರೀವತ್ಸ ಗೆ ಜೆಪಿ ನಗರ D ಬ್ಲಾಕ್ ,ರೈಲ್ವೆ ಟ್ರಾಕ್,ನ ಸುತ್ತಮುತ್ತಲಿನ ಜನತೆ ಮನವಿ ಮಾಡಿದ್ದಾರೆ.ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಜೆಪಿ ನಗರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಇಂದು ಪಾದಯಾತ್ರೆ ನಡೆಸಿ ಅಹವಾಲು ಸ್ವೀಕಾರಿಸುವ ವೇಳೆ ಶಾಸಕ
ಟಿ.ಎಸ್.ಶ್ರೀ ವತ್ಸಗೆ ದೂರುಗಳ ಸುರಿಮಳೆ ಆಯಿತು.
ಕವಿತಾ ಬೇಕರಿಯ ಪಕ್ಕದಲ್ಲಿ ಇರುವ ಟವರ್ ನಿಂದ ಈ ಸುತ್ತಮುತ್ತಲಾಗದ ಜನರಿಗೆ ಸಮಸ್ಯೆ ಆಗುತ್ತಿದೆ.ಟವರ್ ಇರುವ ಕಾರಣ ಈ ಭಾಗದಲ್ಲಿ ಅತಿ ಹೆಚ್ಚು ಕೋತಿಗಳು ಬರುತ್ತಿದೆ ಹಾಗೂ ಎಲೆಕ್ಟ್ರಿಕ್ ಪೋಲಿನ ಮೇಲೆ ಕರೆಂಟ್ ವೈರ್ ಹಾಗೂ ಕೇಬಲ್ ವೈರ್ ಗಳು ಅತಿ ಹೆಚ್ಚಿದ್ದು ಯಾವತ್ತಾದರೂ ಅನಾಹುತ ಅನುಭವಿಸಬಹುದು ಎಂಬ ಕಾರಣದಿಂದ ದಯಮಾಡಿ ಈ ಟವರ್ ನನ್ನು ಬಿಎಸ್ಎನ್ಎಲ್ ರವರ ಸ್ವಂತ ಜಾಗದಲ್ಲಿ ಅಳವಡಿಸಲು ಆದೇಶ ಮಾಡಬೇಕೆಂದು ಮನವಿ ಮಾಡಿದರು.
ಪಕ್ಕದಲ್ಲಿರುವ ಜೆ ಎಸ್ ಎಸ್ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನುಚಿತವಾಗಿ ಸುತ್ತಮುತ್ತಲು ವರ್ತಿಸುತ್ತಾರೆ ಹಾಗೂ ಈ ಭಾಗದಲ್ಲಿ ಅತಿ ಹೆಚ್ಚು ಟು ವೀಲರ್ ರೈಡಿಂಗ್ ಗಳು ನಡೆಯುತ್ತಿರುತ್ತದೆ ದಯಮಾಡಿ ಬೆಳಿಗ್ಗೆ 9:00 ರಿಂದ 10 ಗಂಟೆಯವರೆಗೂ ಸಂಜೆ 4 ರಿಂದ 5 ಗಂಟೆಯವರೆಗೂ ಪೋಲಿಸ್ ನವರ ಗಸ್ತು ಹಾಕಿಸಿ ಕೊಡಬೇಕಾಗಿ ಮನವಿ ಮಾಡಿದರು.
ಸಂಬಂಧ ಪಟ್ಟ ಪೋಲಿಸ್ ಅಧಿಕಾರಿಗೆ ಶಾಸಕ ಶ್ರೀವತ್ಸ ಆದೇಶಮಾಡಿ ಕಡ್ಡಾಯವಾಗಿ ಗಸ್ತು ನಡೆಸಲು ಸೂಚಿಸಿದರು.
ರಸ್ತೆಯ ಇಕ್ಕೆಲದಲ್ಲಿರುವ ಮರಗಳು ತುಂಬಾ ಹಳೆಯದಾಗಿದ್ದು ರಸ್ತೆಗೆ ಬಾಗಿದೆ. ಅತಿಯಾದ ಮಳೆ ಅಥವಾ ಗಾಳಿ ಬಂದಂತ ಸಂದರ್ಭದಲ್ಲಿ ಮನೆಯ ಗೋಡೆಗಳ ಮೇಲೆ ಬಿಳುವ ಸಂಭವವಿದೆ ಅರಣ್ಯ ಇಲಾಖೆಯವರಿಗೆ ನಿರ್ದೇಶನ ನೀಡಿ ಈ ಮರಗಳನ್ನು ತೆಗೆಸಿಕೊಡಬೇಕಾಗಿ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯ ರಾದ ಶಾರದಮ್ಮ ಈಶ್ವರ್, ದೇವರಾಜೇ ಗೌಡ,ನಾಗರಾಜು ಟಿ.ವಿ.ಎಸ್.ಅಕ್ಷಯ್,ದೀಪು, ಶ್ರೀನಿವಾಸ್,ಜೋಗಿ ಮಂಜು, ಪ್ರದೀಪ್, ಕಿಶೋರ್, ಶಿವರಾಜ್ ಸಾಥ್ ನೀಡಿದರು…