ಏಳು ದೇವರುಗಳ ಒಲಿಸಿಕೊಂಡ ದೇವಮಾನವ ಗುಡ್ಡಪ್ಪ ಸೂಸೈಡ್…ಲಕ್ಷಲಕ್ಷ ಸಾಲ ಕೊಟ್ಟ ಭಕ್ತರು ಅತಂತ್ರ…ಕಣ್ಣೀರಲ್ಲಿ ಮುಳುಗಿರುವ ಸಾಲ ಕೊಟ್ಟ ಭಕ್ತವೃಂದ…

  • Crime
  • August 29, 2023
  • No Comment
  • 437

ಏಳು ದೇವರುಗಳ ಒಲಿಸಿಕೊಂಡ ದೇವಮಾನವ ಗುಡ್ಡಪ್ಪ ಸೂಸೈಡ್…ಲಕ್ಷಲಕ್ಷ ಸಾಲ ಕೊಟ್ಟ ಭಕ್ತರು ಅತಂತ್ರ…ಕಣ್ಣೀರಲ್ಲಿ ಮುಳುಗಿರುವ ಸಾಲ ಕೊಟ್ಟ ಭಕ್ತವೃಂದ…

ಬನ್ನೂರು,ಆ29,Tv10 ಕನ್ನಡ

ದೇವರ ಹೆಸರಿನಲ್ಲಿ ಭಕ್ತರಿಗೆ ಲಕ್ಷಾಂತರ ಹಣಕ್ಕೆ ಪಂಗನಾಮ ಹಾಕಿ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದ ಏಳುದೇವರ ಒಲಿಸಿಕೊಂಡಿದ್ದ ದೇವಮಾನವ ಗುಡ್ಡಪ್ಪ ಆತ್ಮಹತ್ಯೆಗೆ ಶರಣಾಗಿದ್ದಾನೆ.ಗುಡ್ಡಪ್ಪನ ಮಾತಿಗೆ ಮರುಳಾಗಿ ಲಕ್ಷಾಂತರ ಸಾಲ ಕೊಟ್ಟ ಭಕ್ತರು ಅತಂತ್ರಕ್ಕೆ ಸಿಲುಕಿದ್ದಾರೆ. ಲಕ್ಷಾಂತರ ಹಣಕ್ಕೆ ಉಂಡೆನಾಮ ಹಾಕಿಸಿಕೊಂಡ ಭಕ್ತರು ಕಣ್ಣೀರಿನಲ್ಲಿ ಮುಳುಗಿದ್ದಾರೆ.

ಬನ್ನೂರಿನ ರಂಗಸಮುದ್ರದ ರಾಜಾಪರಮೇಶ್ವರಿ ನಾಲೆ ದಂಡೆಯಲ್ಲಿ ನಿರ್ಮಿಸಲಾದ ಜಲ್ ಜಲ್ ಶಾಂತಿ ಮಾದಪ್ಪ ದೇವಸ್ಥಾನದ ಗುಡ್ಡಪ್ಪ ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾದವರು.ಜಲ್ ಜಲ್ ಮಾದಪ್ಪ,ಗಂಗಾಮಾತೆ,ಗಿರಿಜಾಮಾತೆ,ಲಕ್ಷ್ಮೀದೇವಿ,ಕರಿಮಾರಮ್ಮ,ಬೆಟ್ಟಳ್ಳಿ ಮಾರಮ್ಮ ಹಾಗೂ ಮುನೇಶ್ವರ ದೇವರುಗಳು ಒಂದೇ ದಿನ ಗುಡ್ಡಪ್ಪನ ಮೈಮೇಲೆ ಬರುತ್ತಿತ್ತು.ಈ ವೇಳೆ ಭಕ್ತರಿಗೆ ಹಣ ನೀಡುವಂತೆ ಆಜ್ಞೆ ಮಾಡುತ್ತಿದ್ದ.ಅಲ್ಲದೆ ದೇವಸ್ಥಾನದಲ್ಲಿ ಹುತ್ತ ನಿರ್ಮಿಸಿ ನಿಧಿ ಇರುವುದಾಗಿ ಆಸೆ ಹುಟ್ಟಿಸಿ ಭಕ್ತರಿಂದ ಲಕ್ಷಾಂತರ ಹಣ ಸಾಲ ಪಡೆದಿದ್ದ.ಸರ್ಕಾರದ ಗಮನಕ್ಕೆ ಹೋದ್ರೆ ನಿಧಿಯನ್ನ ವಶಪಡಿಸಿಕೊಳ್ಳುತ್ತೆ ಎಂಬ ಸಬೂಬು ಹೇಳಿ ಹಣ ಹಿಂದಿರುಗಿಸದೆ ಸತಾಯಿಸುತ್ತಿದ್ದ.ಲಕ್ಷ ಲಕ್ಷಗಳಲ್ಲಿ ಹಣ ಕೊಟ್ಟ ಭಕ್ತರಾದ ಮಹದೇವಮ್ಮ,ಶಿವಮ್ಮ,ಜಯಮ್ಮ,ವಡ್ಗಲ್ಲೇಗೌಡ,ನಾರಾಯಣ,ಅಶ್ವಿನಿ,ಆನಂದ್,ಸುನಂದ,ಮೋಹನ್ ಲಾಲ್ ಎಂಬುವರು ಪೊಲೀಸರ ಮೊರೆ ಹೋಗಿದ್ದರು.ಪೊಲೀಸರ ವಿಚಾರಣೆ ಹಾಗೂ ಸಾಲಗಾರ ಭಕ್ತರ ಒತ್ತಡಕ್ಕೆ ಹೆದರಿದ ಗುಡ್ಡಪ್ಪ ವಿಜಯ್ ಕುಮಾರ್ ಕಳೆದ ವರ್ಷ ನಾಪತ್ತೆಯಾದ. ಗುಡ್ಡಪ್ಪನ ಪತ್ತೆಗಾಗಿ ಭಕ್ತರು ಹುಡುಕಾಟದಲ್ಲಿದ್ದಾಗಲೇ ಶಾಕಿಂಗ್ ನ್ಯೂಸ್ ತಲುಪಿದೆ.ಮಂಡ್ಯದ ಹೊಸೂರುಕಾಲೋನಿ ಹಳ್ಳಿಯ ತೋಟದ ಮನೆಯೊಂದರಲ್ಲಿ ಗುಡ್ಡಪ್ಪ ವಿಜಯ್ ಕುಮಾರ್ ನೇಣಿಗೆ ಶರಣಾಗಿದ್ದಾನೆ.ರಂಗಸಮುದ್ರದಿಂದ ನಾಪತ್ತೆಯಾದ ಏಳುದೇವರ ಒಲಿಸಿಕೊಂಡ ಗುಡ್ಡಪ್ಪ ವಿಜಯ್ ಕುಮಾರ್ ಖಾಸಗಿ ವ್ಯಕ್ತಿಯೊಬ್ಬರ ತೋಟದ ಮನೆ ಸೇರಿಕೊಂಡು ಹಸುಗಳನ್ನ ಸಾಕುತ್ತಾ ತೋಟದ ನಿರ್ವಹಣೆಯಲ್ಲಿ ಮುಳುಗಿದ್ದ.ಜುಲೈ 13 ರಂದು ವಿಜಯ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.ನಿಧಿ ಆಸೆಗೆ ಲಕ್ಷಾಂತರ ಹಣ ನೀಡಿ ವಂಚನೆಗೆ ಒಳಗಾದ ಭಕ್ತರು ಕಣ್ಣೀರಿನಲ್ಲಿ ಮುಳುಗಿದ್ದಾರೆ.ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಜಲ್ ಜಲ್ ಶಾಂತಿ ಮಾದಪ್ಪ ದೇವಾಲಯವೂ ಅನಾಥವಾಗಿದೆ.ಹಣ ಕಳೆದುಕೊಂಡು ಕಣ್ಣೀರಿನಲ್ಲಿ ಮುಳುಗಿರುವ ಭಕ್ತರ ಪರಿಸ್ಥಿತಿ ಶೋಚನೀಯವಾಗಿದೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *