ಕ್ರೀಡೆಯು ವಿದ್ಯಾರ್ಥಿಗಳ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿತ್ತದೆ-ಲಯನ್ ಸಿ.ಆರ್ .ದಿನೇಶ್
- TV10 Kannada Exclusive
- August 29, 2023
- No Comment
- 108
ಕ್ರೀಡೆಯು ವಿದ್ಯಾರ್ಥಿಗಳ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿತ್ತದೆ-ಲಯನ್ ಸಿ.ಆರ್ .ದಿನೇಶ್
ಕ್ರೀಡೆಯು ವಿದ್ಯಾರ್ಥಿಗಳ ಮಾನಸಿಕ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಒಳ್ಳೆಯ ಆರೋಗ್ಯಕ್ಕೆ ದೈಹಿಕ ಹಾಗೂ ಮಾನಸಿಕ ಚಟುವಟಿಕೆ ಬಹಳ ಮುಖ್ಯ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ ದಿನೇಶ್ ರವರು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಈ ಮಾತು ಹೇಳಿದರು.
ಹಿರಿಯ ವಿದ್ಯಾರ್ಥಿ ಸಕ್ಲೆನ್ ಪಾಷಾ ಕಬ್ಬಡಿಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸ ಕ್ರೀಡಾ ಪಟುವನ್ನು ಸನ್ಮಾನಿಸಲಾಯಿತು . ಸಕ್ಲೇನ್ ಪಾಶಾ ಮಾತನಾಡಿ ವಿದ್ಯಾರ್ಥಿಗಳು ಓದಿಗಾಗಿ ಎಷ್ಟು ಅಧ್ಯತೆ ಕೊಡುತ್ತಿರೊ ಅಷ್ಟೇ ಅಧ್ಯತೆಯನ್ನು ಆಟದ ಕಡೆಗೆ ನೀಡಬೇಕು ಎಂದರು.
ಉಪನ್ಯಾಸಕ ರಂಗಸ್ವಾಮಿ ವಿಶೇಷ ಉಪನ್ಯಾಸ ನೀಡಿ ಕ್ರೀಡೆ ಯು ಸೋಲು ಗೆಲುವಿನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಬರಲು ಸಾದ್ಯ ಎಂದು ಹೇಳಿದರು.
ಹಿರಿಯ ಉಪನ್ಯಾಸಕರಾದ ಅಶ್ವತ್ಥ ನಾರಾಯಣ ಗೌಡ ರವರು ಕ್ರೀಡೆಯು ಮನರಂಜನೆಯ ಜೊತೆಗೆ ವ್ಯಕ್ತಿತ್ವ ವಿಕಸನಗೊಳ್ಳಲು ಸಾದ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜುಡಿತ್ ಸಿಕವೈರಾ ,ಡಾ ರವಿ ಟಿ.ಕೆ., ಕ್ರೀಡಾ ಕಾರ್ಯದರ್ಶಿ ಸದಾನಂದ , ಹರೀಶ್ ಉಪಸ್ಥಿತರಿದ್ದರು.