8 ತಿಂಗಳ ಗರ್ಭಿಣಿಯ ಕುತ್ತಿಗೆ ಕೊಯ್ದು ಕೊಂದ ಪಾಪಿ ಗಂಡ…ಹಣಕ್ಕಾಗಿ ಪೀಡಿಸಿ ಕೊಲೆ…ಹೆತ್ತ ತಾಯಿ ಮುಂದೆ ದಾರುಣ ಹತ್ಯೆ…

8 ತಿಂಗಳ ಗರ್ಭಿಣಿಯ ಕುತ್ತಿಗೆ ಕೊಯ್ದು ಕೊಂದ ಪಾಪಿ ಗಂಡ…ಹಣಕ್ಕಾಗಿ ಪೀಡಿಸಿ ಕೊಲೆ…ಹೆತ್ತ ತಾಯಿ ಮುಂದೆ ದಾರುಣ ಹತ್ಯೆ…

ನಂಜನಗೂಡು,ಸೆ14,Tv10 ಕನ್ನಡ

ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ 8 ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯ ಕುತ್ತಿಗೆಯನ್ನ ಬ್ಲೇಡ್ ನಿಂದ ಕೊಯ್ದು ಕೊಂದ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ.ಹೆತ್ತ ತಾಯಿ ಮುಂದೆ ದಾರುಣವಾಗಿ ಕೊಂದ ಪಾಪಿ ಗಂಡನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಶೋಭಾ(26) ಮೃತ ದುರ್ದೈವಿ. ದಾರುಣವಾಗಿ ಹತ್ಯೆ ಮಾಡಿ ಪೊಲೀಸರ ಅತಿಥಿಯಾದ ಪತಿರಾಯ ಮಂಜು(27)
8 ವರ್ಷಗಳ ಹಿಂದೆ ಶೋಭಾ ಹಾಗೂ ಮಂಜು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು.ಒಂದು ಮಗುವಿನ ತಾಯಿ ಆಗಿದ್ದ ಶೋಭಾ ಎರಡನೇ ಮಗುವಿಗೆ 8 ತಿಂಗಳ ಗರ್ಭಿಣಿಯಾಗಿದ್ದರು.ಮದುವೆಯಾದ ಪ್ರಾರಂಭದಲ್ಲಿ ಶೋಭಾಳನ್ನ ಮಂಜು ಚೆನ್ನಾಗಿ ನೋಡಿಕೊಂಡಿದ್ದ.ನಂತರದ ದಿನಗಳಲ್ಲಿ ಹಣದ ವ್ಯಾಮೋಹಕ್ಕೆ ಬಿದ್ದ ಮಂಜು ಪತ್ನಿಗೆ ಕಿರುಕುಳ ನೀಡುತ್ತಿದ್ದ.ಆಗಾಗ ಪತ್ನಿಯನ್ನ ತವರು ಮನೆಗೆ ಕಳುಹಿಸಿ ಹಣ ತರಿಸಿಕೊಳ್ಳುತ್ತಿದ್ದ.5 ವರ್ಷಗಳ ಹಿಂದೆ ಪತಿಯನ್ನ ಕಳೆದುಕೊಂಡ ಶೋಭಾಳ ತಾಯಿ ಪದ್ಮಾ ಗೆ ವಿಮೆ ಹಣ ಬಂದಿತ್ತು.ಆ ಹಣದ ಮೇಲೆ ಕಣ್ಣು ಹಾಕಿದ ಮಂಜು 3 ಲಕ್ಷ ಪೀಕಿದ್ದ.ಹೀಗಿದ್ದೂ ಹಣದ ದಾಹ ತೀರಿರಲಿಲ್ಲ.

ತುಂಬು ಗರ್ಭಿಣಿಯಾಗಿದ್ದ ಶೋಭಾಳನ್ನ ಹೆರಿಗೆಗಾಗಿ ತಾಯಿ ಪದ್ಮ ಮನೆಗೆ ಕರೆತಂದಿದ್ದರು.ಇಂದು ಬೆಳಿಗ್ಗೆ ಮನೆಗೆ ಬಂದ ಮಂಜು ತಾಯಿ ಪದ್ಮಾ ಹಾಗೂ ನೆರೆಹೊರೆ ಜನರ ಮುಂದೆ ಹಣಕ್ಕಾಗಿ ಕ್ಯಾತೆ ತೆಗೆದಿದ್ದಾನೆ.ದುಡ್ಡು ತಗೊಂಡು ಬಾ ಅಂದ್ರೆ ಇಲ್ಲೇ ಇದ್ಯಾ ಎಂದು ಕೂಗಾಡಿ ತುಂಬು ಗರ್ಭಿಣಿಯನ್ನ ಎಳೆದಾಡಿ ತಾಯಿ ಪದ್ಮ ಮುಂದೆಯೇ ಬ್ಲೇಡ್ ನಿಂದ ಕುತ್ತಿಗೆ ಕುಯ್ದಿದ್ದಾನೆ.ತೀವ್ರ ರಕ್ತಸ್ರಾವದಿಂದ ಬಳಲಿದ ಶೊಭಾಳನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ 8 ತಿಂಗಳ ಗರ್ಭಿಣಿ ಶೋಭಾ ಮೃತಪಟ್ಟಿದ್ದಾರೆ. ಕೃತ್ಯವೆಸಗಿದ ಆರೋಪಿ ಮಂಜುವನ್ನ ನಂಜನಗೂಡು ಟೌನ್ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *