ಸರ್ಕಾರಿ ನೌಕರರೇ ಟೀ,ಕಾಫಿ ಅಂತ ಕಚೇರಿ ಬಿಟ್ಟು ಹೋಗ್ತೀರಾ…?ಹಾಗಿದ್ರೆ ಹುಷಾರ್…!!

ಸರ್ಕಾರಿ ನೌಕರರೇ ಟೀ,ಕಾಫಿ ಅಂತ ಕಚೇರಿ ಬಿಟ್ಟು ಹೋಗ್ತೀರಾ…?ಹಾಗಿದ್ರೆ ಹುಷಾರ್…!!

ಮೈಸೂರು,ಸೆ16,Tv10 ಕನ್ನಡ

ಕಚೇರಿ ವೇಳೆಯಲ್ಲಿ ಟೀ,ಕಾಫಿ,ಸ್ನಾಕ್ಸ್ ಅಂತ ಹೊರಗೆ ಹೋಗಿ ಗಂಟೆಗಳ ಕಾಲ ಸಮಯ ವ್ಯರ್ಥ ಮಾಡುವ ನೌಕರರಿಗೆ ಸರ್ಕಾರ ಮೂಗುದಾರ ಹಾಕಲು ತೀರ್ಮಾನಿಸಿದೆ.ಅಂತಹ ನೌಕರರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಕಡಕ್ ವಾರ್ನಿಂಗ್ ಕೊಟ್ಟಿದ್ದಾರೆ.ಪ್ರಧಾನ ಕಾರ್ಯದರ್ಶಿಗಳು ಖುದ್ದು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.ಬೆಳಿಗ್ಗೆ 10.45 ಗಂಟೆ ಸಮಯವಾದರೂ ಕಚೇರಿಗೆ ಹಾಜರಾಗದಿರುವುದು.ಸಂಜೆ ವೇಳೆ ನಿಗದಿತ ಸಮಯಕ್ಕೆ ಮೊದಲೇ ನಿರ್ಗಮಿಸುವುದು ಕಂಡು ಬಂದಿರುವ ಹಿನ್ನಲೆ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ.ಕಂದಾಯ ಇಲಾಖೆ ನೌಕರರು ಇನ್ಮುಂದೆ ಬೆಳಿಗ್ಗೆ 10.30 ಕಚೇರಿಗೆ ಹಾಜರಾಗಬೇಕು.ಸಾಯಂಕಾಲ ತಮ್ಮ ಶಾಖೆಯ ಸಂಭಂಧಪಟ್ಟ ಜಂಟಿ/ಉಪಕಾರ್ಯದರ್ಶಿಯವರ ಅನುಮತಿ ಪಡೆದು ತೆರಳುವಂತೆ ಸೂಚನೆ ನೀಡಿದ್ದಾರೆ.ಹಾಗೊಂದು ವೇಳೆ ನಿಯಮ ಪಾಲಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳವುದಾಗಿ ಎಚ್ಚರಿಕೆ ನೀಡಿದ್ದಾರೆ…

Spread the love

Related post

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ ಭರ್ಜರಿ ಸಾಧನೆ

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ…

ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ ನಯನ ಕುಕ್ಕೂರು, ಅನುಶ್ರೀಗೆ ಭರ್ಜರಿ ಸಾಧನೆ ಮೈಸೂರು:ಮೈಸೂರಿನಲ್ಲಿ 01/02/2026 ರಂದು ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಫೆಸ್ಟ್‌ನಲ್ಲಿ ಮೈಸೂರಿನ…
ಅಭಿಮಾನಿಗಳೊಂದಿಗೆ ಅಭಿಮಾನ ಹಂಚಿಕೊಂಡ ಡಾ.ಚೇತನ

ಅಭಿಮಾನಿಗಳೊಂದಿಗೆ ಅಭಿಮಾನ ಹಂಚಿಕೊಂಡ ಡಾ.ಚೇತನ

*ಬಿಜಾಪುರ ಜಿಲ್ಲೆ ಇಂಡಿ ಪಟ್ಟಣದ ಅದ್ಭುತ ಪ್ರತಿಭೆ ತಮ್ಮ ರಾಷ್ಟ್ರಮಟ್ಟದ ಬಹು ಪ್ರಶಸ್ತಿಗಳ ಮೂಲಕ ದೇಶಕ್ಕೆ ನಾಡಿಗೆ ಮತ್ತೆ ಹುಟ್ಟುರಿಗೆ ಕೀರ್ತಿ ತಂದಿದ್ದಾರೆ ಚೇತನ ಬಸವರಾಜ ಮೂರಮನ ಕ್ಷಮಿಸಿ…
ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರವಿರುವ ಬಾವುಟ ತಂದ ವಿವಾದ…ಅರ್ಧಕ್ಕೆ ಸ್ಥಗಿತಗೊಂಡ ಜಾತ್ರೆ…ರಸ್ತೆ ಮಧ್ಯದಲ್ಲಿ ನಿಂತ ತೇರು…ದೇವಾಲಯಕ್ಕೆ ಬೀಗ…ಗ್ರಾಮದಲ್ಲಿ ಬಿಗುವಿನ ವಾತಾವರಣ

ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರವಿರುವ ಬಾವುಟ ತಂದ ವಿವಾದ…ಅರ್ಧಕ್ಕೆ ಸ್ಥಗಿತಗೊಂಡ…

ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರವಿರುವ ಬಾವುಟ ತಂದ ವಿವಾದ…ಅರ್ಧಕ್ಕೆ ಸ್ಥಗಿತಗೊಂಡ ಜಾತ್ರೆ…ರಸ್ತೆ ಮಧ್ಯದಲ್ಲಿ ನಿಂತ ತೇರು…ದೇವಾಲಯಕ್ಕೆ ಬೀಗ…ಗ್ರಾಮದಲ್ಲಿ ಬಿಗುವಿನ ವಾತಾವರಣ… ನಂಜನಗೂಡು,ಜ31,Tv10 ಕನ್ನಡ ಗ್ರಾಮದ ಫೋಕಸ್ ಲೈಟ್…

Leave a Reply

Your email address will not be published. Required fields are marked *