
ಮಹಿಳಾ ಪಿಎಸ್ಸೈ ಯಾಸ್ಮಿನ್ ತಾಜ್ ವರ್ಗಾವಣೆ…ಮಗನ ಪುಂಡಾಟಕ್ಕೆ ಶಿಕ್ಷೆಯೇ…?
- TV10 Kannada Exclusive
- September 17, 2023
- No Comment
- 1065

ಮೈಸೂರು,ಸೆ17,Tv10 ಕನ್ನಡ


ವ್ಹೀಲಿಂಗ್ ಮಾಡಯವ ವೇಳೆ ರೈತನಿಗೆ
ಢಿಕ್ಕಿಹೊಡೆದು ಸಾವಿಗೆ ಕಾರಣವಾದ ಸೈಯದ್ ಐಮಾನ್ ತಾಯಿ WPSI ಯಾಸ್ಮಿನ್ ತಾಜ್ ಗೆ ವರ್ಗಾವಣೆಯಾಗಿದೆ.ನಂಜನಗೂಡು ಸಂಚಾರಿ ಠಾಣೆ ಪಿಎಸ್ಸೈ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಯಾಸ್ಮಿನ್ ತಾಜ್ ಈ ಕೂಡಲೇ ಮೈಸೂರು ಡಿಸಿಆರ್ ಬಿ ವಿಭಾಗದಲ್ಲಿ ವರದಿ ಮಾಡಿಕೊಳ್ಳುವಂತೆ ಜಿಲ್ಲಾ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.ಮಗನ ಶೋಕಿಗೆ ತಾಯಿಗೆ ವರ್ಗಾವಣೆ ಶಿಕ್ಷೆ ಎಂದೇ ಹೇಳಲಾಗಿದೆ.ಇಂದು ಮಧ್ಯಾಹ್ನ ಡಿಸಿಆರ್‌ಬಿ ಡಿವೈಎಸ್ಪಿ ಬಳಿ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ..