ಕೆಆರ್‌ಎಸ್‌‌ನಲ್ಲಿ ಹೆಚ್‌ಡಿಕೆ ಹೇಳಿಕೆ.
ರಾಜ್ಯದಲ್ಲಿ ಕಾವೇರಿ ಜಲಾನಯನ ಪ್ರದೇಶದ ರೈತರ ಬೆಳೆ ಒಣಗಿದೆ.
ಬೆಳೆಗಳಿಗೆ ಎರಡು ಕಟ್ಟು ನೀರು ಬಿಡಬೇಕಾದ ಅನಿವಾರ್ಯ


ಐದು ವರ್ಷಕ್ಕೊಮ್ಮೆ ಈ ರೀತಿ ಬರ ಬರುತ್ತೆ.
ರೈತ, ಕನ್ನಡ ಪರ ಸಂಘಟನೆಗಳು ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿವೆ


ಈ ಸರ್ಕಾರ ಪ್ರಾರಂಭಿಕ ಹಂತದಲ್ಲಿ ಎಡವಿದೆ ಎಂದು ಮೊದಲೆ ಹೇಳಿದೆ.
ಪ್ರಾಧಿಕಾರದ ಸಭೆಯಲ್ಲಿ ಐದು ಸಾವಿರ ಬಿಡಬೇಕು ಎಂದು ಹೇಳಿದೆ


ತಮಿಳುನಾಡು ಅಧಿಕಾರಿಗಳು ಸಭೆಯಲ್ಲಿ15 ಜನ ಇರ್ತಾರೆ.
ನಮ್ಮವರು ಲಘುವಾಗಿ ಈ ವಿಚಾರವನ್ನು ತೆಗೆದುಕೊಳ್ಳುತ್ತಿದ್ದಾರೆ.
ತಮಿಳುನಾಡಿನವರು ಸಭಾ ತ್ಯಾಗ ಮಾಡಿ ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ.
ನೀವು ನೀರು ಬಿಡಬೇಡಿ, ನಾವು ಕೋರ್ಟ್‌ಗೆ ಹೋಗೋಣಾ ಎಂದು ಸರ್ಕಾರಕ್ಕೆ ಹೇಳಿದ್ದೆ


ತಕ್ಷಣ ಸರ್ವ ಪಕ್ಷಗಳ ಸಭೆ ಕರೆತಲು ಹೇಳಿದ್ದೆ.
ನಮಗೆ ಪೇಪರ್ ಪೆನ್ ಕೊಡಿ ನಿಮ್ಮ ಉಳಿಸುತ್ತೇವೆ ಎಂದು ನೀರಾವರಿ ಸಚಿವರು ಕೇಳಿದ್ರು.
ರೈತರು ಅದಕ್ಕೆ ಅಧಿಕಾರ ಕೊಟ್ಟರು.
ಇದೀಗ ರೈತರನ್ನೇ ಕೋರ್ಟ್‌ಗೆ ಹೋಗಿ ಅಂತಾರೆ.
ಕಳೆದ ಒಂದು ತಿಂಗಳಿಂದ ಹೋದ ನೀರನ್ನು ನಿಲ್ಲಿಸಿದ್ರೆ ನಮ್ಮ ರೈತರನ್ನು ಉಳಿಸಬಹುದಿತ್ತು.
ಆದ್ರೆ ಇವರು ಪ್ರಾಧಿಕಾರ ಹೇಳಿದ ತಕ್ಷಣ ಬಿಟ್ರು.
ಕೋರ್ಟ್ ನಮ್ಮ ಮುಂದೆ ಬರಬೇಡಿ, ನೀವು ಕೂತು ತೀರ್ಮಾನ ಮಾಡಿಕೊಳ್ಳಿ ಅಂತಾ ಹೇಳಿದ್ದಾರೆ.
2013ರಲ್ಲಿ ಜ್ಞಾನಿಚಂದ್ ಎಂಬಾತ ಸುಪ್ರೀಂಕೋರ್ಟ್‌ಗೆ ಆಂಧ್ರಗೆ ಸಂಬಂಧ ಅರ್ಜಿ ಹಾಕಿದ್ದ.
ಅಲ್ಲಿ ಕೋರ್ಟ್ ಆದೇಶ ಪಾಲನೆ ಮಾಡಿಲ್ಲ ಎಂದು‌ ಹೇಳಿದ್ರು.
ಆಗ ಪಾಲಿಸದ ಆದೇಶವನ್ನು ಪಾಲಿಸು ಆಗದೇ ಇರುವುದು ನ್ಯಾಯಾಂಗ ನಿಂದನೆ ಆಗಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು.
ಇದನ್ನು ಉದಾಹರಣೆ ತೆಗೆದುಕೊಂಡು ರಾಜ್ಯ ಸರ್ಕಾರ ಧೃಡ ನಿರ್ಧಾರ ತೆಗೆದುಕೊಳ್ಳಬೇಕು
ತಮಿಳುನಾಡಿನ ಅಧಿಕಾರಿಗಳು ದಾಖಲೆ ಸಮೇತ ಸಭೆಗೆ ಹೋಗ್ತಾರೆ.
ನಮ್ಮವರು ವರ್ಜುಲ್ ಮೀಟಿಂಗ್‌ನಲ್ಲಿ ಕೂರುತ್ತಾರೆ.
ತಮಿಳುನಾಡಿನಲ್ಲಿ ಅಧಿಕ ಪ್ರಮಾಣದಲ್ಲಿ ಕೃಷಿ ಭೂಮಿ ವಿಸ್ತಾರ ಮಾಡಿಕೊಂಡಿದೆ.
ಇದು ಕಾನೂನು‌ ಬಾಹಿರವಾಗಿದೆ.
ಈ ವಿಚಾರವನ್ನು ನಮ್ಮ ಅಧಿಕಾರಿಗಳು ಪ್ರಶ್ನೆಯೇ ಮಾಡಿಲ್ಲ.
2007ರಲ್ಲಿ ಅಂತಿಮ ತೀರ್ಪು ನೀಡಿದ್ದರು.
ಆಗ ನಾನು ಸಿಎಂ ಆಗಿದ್ದೆ.
ಆಗ ನಾನು ಹೆಚ್ಚುವರಿ ನೀರು ಬೇಕು ಅಂತಾ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿದ್ದೋ.
ಆಗ ನಮಗೆ 14.5 ಟಿಎಂಸಿ ಹೆಚ್ಚುವರಿ ನೀರು ಕೊಟ್ಟರು.
ಆಗ ಕೋರ್ಟ್ ಪ್ರಾಧಿಕಾರದ ಮುಂದೆ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಅಂದ್ರು.
ನಮ್ಮ ರಾಜ್ಯದಲ್ಲಿ ನಿವೃತ್ತ ಚೀಫ್ ಜಸ್ಡಿಸ್‌ಗಳು ಇದ್ದಾರೆ.
ಅವರ ಸಲಹೆಗಳನ್ನು ತೆಗೆದುಕೊಳ್ಳಬೇಕು.
ಅವರ ಜೊತೆ ಚರ್ಚೆ ಮಾಡಿ.
ಅವರಿಗೆ ಅನುಭವ ಇದೆ.
ಸರ್ಕಾರ ನೀರು ಈಗಲೂ ನೀರು ಬಿಡಬಾರದು.
ಬೆಂಗಳೂರಿನಲ್ಲಿ ವಸೂಲಿ ಮಾಡೋದು ಮುಂದಕ್ಕೆ ಹಾಕಿ.
ಈ ವಿಚಾರದ ಬಗ್ಗೆ ಗಮನಕೊಡಿ.
ತಮಿನಾಡು ಮಿನಿಸ್ಟರ್ ಕೆಆರ್‌ಎಸ್‌ ಅವರ ಅಪ್ಪಂದಾ ಎಂದು‌ ಹೇಳಿದ್ದಾನೆ.
ಮಾತಿನ ಮೇಲೆ ಹಿಡಿತ ಇರಲಿ.
ಸ್ಟಾಲಿನ್ ನಿಮ್ಮ ಮಂತ್ರಿಗಳನ್ನು ಹಿಡಿತದಲ್ಲಿ ಹಿಡಿದುಕೊಳ್ಳಬೇಕು
ಸೋನಿಯಾ ಗಾಂಧಿ, ಖರ್ಗೆಯವರನ್ನು ಮೆಚ್ಚಿಸಲು ನೀವು ಇಲ್ಲ.
India ಮಾಡಿಕೊಂಡು ರಾಜ್ಯದ ಜನರನ್ನು ಹಾಳು ಮಾಡ್ತಾ ಇದ್ದಾರೆ.
ದೇವೇಗೌಡರನ್ನು ಪ್ರಶ್ನೆ ಮಾಡುವ ಎಂಎಲ್‌ಗಳು ಡ್ಯಾಂ ಅಭಿವೃದ್ಧಿ ಮಾಡುವಾಗ ಅವರು ಹುಟ್ಟಿರಲೇ ಇಲ್ಲ.
ನಾಳೆಯ ಬೆಂಗಳೂರು ಬಂದ್‌ಗೆ ಜೆಡಿಎಸ್ ಬೆಂಬಲ ಇದೆ.
ಹಿಂದೆ ಕಾನೂನಿನೆ ತಲೆ ಬಾಗಿ ಹಿಂದಿನ ಸರ್ಕಾರ ನೀರು ಬಿಟ್ಟಿವೆ

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *