
ಕಾವೇರಿಗಾಗಿ ಹೋರಾಟ…ತಮಿಳಿನಾಡು ಸಿಎಂ ಅಣುಕು ಶವಯಾತ್ರೆ…ಕರವೇ ಸ್ವಾಭಿಮಾನಿ ಸೇನೆಯಿಂದ ಆಕ್ರೋಷ…
- TV10 Kannada Exclusive
- September 26, 2023
- No Comment
- 203

ಮೈಸೂರು,ಸೆ26,Tv10 ಕನ್ನಡ
ಮೈಸೂರಿನಲ್ಲಿ ಕಾವೇರಿಗಾಗಿ ಪ್ರತಿಭಟನೆ ಮುಂದುವರಿದಿದೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ತಮಿಳುನಾಡು ಸಿಎಂ ಸ್ಟ್ಯಾಲಿನ್ ಅಣುಕು ಶವಯಾತ್ರೆ ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಜಿಲ್ಲಾ ಪಂಚಾಯತ್ ಕಚೇರಿಯಿಂದ ಆರ್.ಟಿ.ಓ.ಕಚೇರಿ ವರೆಗೂ ಅಣುಕು ಶವಯಾತ್ರೆ ನಡೆಸಿದ್ದಾರೆ.ಸಂಘಟನೆಯ ಅಧ್ಯಕ್ಷ ಲಿಂಗರಾಜು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆದಿದೆ.ಕಾವೇರಿ ನಮ್ಮದು ಎಂದು ಘೋಷಣೆ ಕೂಗಿದ್ದಾರೆ.ತಮಿಳುನಾಡು ಹಾಗೂ ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸಿದ್ದಾರೆ…