
ಕಾವೇರಿಗಾಗಿ ಬ್ರಾಹ್ಮಣ ಸಂಘದಿಂದ ಸಾಮೂಹಿಕ ಭಜನೆ,ಶಂಖನಾದ,ಗಂಟೆ ಜಾಗಟೆ ಮೂಲಕ ಪ್ರತಿಭಟನೆ…
- TV10 Kannada Exclusive
- September 26, 2023
- No Comment
- 354

ಮೈಸೂರು,ಸೆ26,Tv10 ಕನ್ನಡ
ಕರ್ನಾಟಕದ ಜೀವನದಿ ಕಾವೇರಿ ತಮಿಳು ನಾಡಿಗೆ ಪ್ರತಿನಿತ್ಯ 5000ಕ್ಯೂಸೆಕ್ಸ್ ಹೊರಹರಿವಿನಿಂದಾಗಿ ರೈತಾಪಿ ಕೃಷಿ ವರ್ಗಕ್ಕೆ, ಕುಡಿಯುವ ನೀರಿಗೆ ಆಗುತ್ತಿರುವ ಅನ್ಯಾಯ ತಮಿಳುನಾಡಿನ ಧೋರಣೆ ಖಂಡಿಸಿ ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ವಿಪ್ರ ಸಮುದಾಯದವರು ಜಾಗಟೆ ಶಂಕ ಸಾಮೂಹಿಕ ಭಜನೆ ಮಾಡುವ ಮೂಲಕ ಮೈಸೂರು ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು.
ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಢಯಿತು.ಡಿ.ಟಿ.ಪ್ರಕಾಶ್ ಮಾತನಾಡಿ ಕನ್ನಡ ನೆಲ ಜಲ ಭಾಷೆ ವಿಚಾರವಾಗಿ ಧಕ್ಕೆ ಬಂದಾಗ ಪ್ರತಿಭಟಿಸುವುದು ನ್ಯಾ ಕೇಳುಕುವುದು ಪ್ರತಿಯೊಬ್ಬ ಕನ್ನಡಿಗರ ಹಕ್ಕು, ಸುಪ್ರಿಂಕೋರ್ಟ್ ತೀರ್ಪಿಗೆ ತಲೆಬಾಗಬೇಕು ನಿಜ ಆದರೆ ವಾಸ್ತವತೆ ವೈಜ್ಞಾನಿಕತೆ ವಿಷಯವನ್ನ ಅರಿವು ಮಾಡಿಕೊಡಬೇಕಾಗಿರುವುದು ನಮ್ಮ ಕರ್ನಾಟಕದ ಜನಪ್ರತಿನಿಧಿಗಳ ಕರ್ತವ್ಯ ಈ ಹಿಂದೆಯೂ ಕೂಡ ಕರ್ನಾಟಕಕ್ಕೆ ತಮಿಳುನಾಡು ಸರ್ಕಾರ ನೀರಿಗಾಗಿ ಖ್ಯಾತೆ ತೆಗೆದಾಗ ಅಂದು ಮಾಜಿ ಪ್ರಧಾನಿ ಹೆಚ್.ಡಿ ದೇವಗೌಡ ಮತ್ತು ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ರವರ ನೇತೃತ್ವದಲ್ಲಿ ಕರ್ನಾಟಕದ ಸಮಸ್ತ ಜನಪ್ರತಿನಿಧಿಗಳ ನಿಯೋಗ ರಾಷ್ಟ್ರಪತಿ ರಾಜ್ಯಪಲರ ಬಳಿ ಕರ್ನಾಟಕದ ಸಮಸ್ಯೆಯನ್ನ ತಿಳಿಸಿ ನ್ಯಾಯ ಕೊಡಿಸಿದ್ದರು, ಇಂದು ಅಂತಹ ಆರೊಗ್ಯಕರ ಸಮನ್ವಯ ಕಾಣದಿರುವುದು ಬೇಸರದ ಸಂಗತಿ ಎಂದರು, ಮತ್ತೊಮ್ಮೆ ನ್ಯಾಯಾಲಯ ಕಾವೇರಿ ತೀರ್ಪನ್ನ ಪರಿಶೀಲಿಸಿ 5000ಕ್ಯೂಸೆಕ್ಸ್ ಹೊರಹರಿವು ಚರ್ಚಿಸಿ ಕನ್ನಡಿಗರಿಗೆ ನ್ಯಾಯ ಸಿಗಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ನo ಶ್ರೀಕಾಂತ ಕುಮಾರ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಅರ್ಚಕರ ಸಂಘದ ಅಧ್ಯಕ್ಷರಾದ ವಿದ್ವಾನ್ ಕೃಷ್ಣಮೂರ್ತಿ, ಮಾಜಿನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಕಡಕೋಳ ಜಗದೀಶ್, ಜಯಸಿಂಹ ಶ್ರೀಧರ್, ಶ್ರೀನಿವಾಸ್ ಬಾಷ್ಯಂ, ಓಂ ಶ್ರೀನಿವಾಸ್, ಅಪೂರ್ವ ಸುರೇಶ್, ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು…