ನಿವೇಶನ ಕೊಡಿಸುವುದಾಗಿ ವಂಚನೆ…ಮಾಜಿ ಕಾರ್ಪೊರೇಟರ್ ಹಾಗೂ ನಿವೃತ್ತ ಡಿವೈಎಸ್ಪಿ ವಿರುದ್ದ FIR…
- Crime
- September 28, 2023
- No Comment
- 3100
ಮೈಸೂರು,ಸೆ29,Tv10 ಕನ್ನಡ
ನಿವೇಶನ ಕೊಡಿಸುವುದಾಗಿ ನಂಬಿಸಿ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅಮಾಯಕರೊಬ್ಬರಿಗೆ 12 ಲಕ್ಷ ವಂಚಿಸಿದ ಆರೋಪದ ಮೇಲೆ ಮಾಜಿ ಕಾರ್ಪೊರೇಟರ್ ಸೋಮಸುಂದರ್ ಹಾಗೂ ನಿವೃತ್ತ ಡಿವೈಎಸ್ಪಿ ವಿಜಯ್ ಕುಮಾರ್ ವಿರುದ್ದ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಮೈಸೂರಿನ ಬೋಗಾದಿ ನಿವಾಸಿ ವೆಂಕಟರಾಜು ಎಂಬುವರು ನೀಡಿದ ದೂರಿನ ಆಧಾರದ ಮೇಲೆ FIR ದಾಖಲಾಗಿದ್ದು ಸೋಮಸುಂದರ್ ರನ್ನ ವಶಕ್ಕೆ ಪಡೆದಿರುವ ಲಕ್ಷ್ಮೀಪುರಂ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬೀದಿಬದಿಯಲ್ಲಿ ಹೋಟೆಲ್ ನಡೆಸುತ್ತಿರುವ ವೆಂಟರಾಜು ಸ್ವಂತ ಮನೆ ನಿರ್ಮಿಸುವ ಕನಸು ಹೊತ್ತು ಸ್ನೇಹಿತ ದಿನೇಶ್ ಎಂಬಾತನ ಮೂಲಕ ನಿವೇಶನ ಪಡೆಯಲು ಸೋಮಸುಂದರ್ ರವರನ್ನ ಭೇಟಿ ಮಾಡಿದ್ದಾರೆ.ಮುಡಾದಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿದ ಸೋಮಸುಂದರ್ ಆನಂದನಗರ ಬಡಾವಣೆಗೆ ವೆಂಕಟರಾಜು ರನ್ನ ಕರೆದೊಯ್ದು ಯಾರದೋ ನಿವೇಶನದ ಮುಂದೆ ನಿಲ್ಲಿಸಿ ಫೋಟೋ ತೆಗೆದು ಮುಡಾದಲ್ಲಿ ಮಂಜೂರು ಮಾಡಿಸುವುದಾಗಿ ನಂಬಿಸಿದ್ದಾರೆ.ನಂತರ ಹಂತ ಹಂತವಾಗಿ ವೆಂಕಟರಾಜು ರಿಂದ ಸೋಮಸುಂದರ್ 12 ಲಕ್ಷ ಪಡೆದಿದ್ದಾರೆ.ಹಣ ಪಡೆದ ನಂತರ ವೆಂಕಟರಾಜು ರವರಿಗೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಕಟ್ಟಿದಂತೆ,ಮುಡಾ ಹಾಗೂ ಮೈಸೂರು ಮಹಾನಗರ ಪಾಲಿಕೆಯಲ್ಲಿ ತೆರಿಗೆ ಹಣ ಪಾವತಿಸಿದಂತೆ ಸೇರಿ ಹಲವು ದಾಖಲೆಗಳನ್ನ ನೀಡಿ ನಂಬಿಸಿದ್ದಾರೆ.ನಂತರ ಸದರಿ ನಿವೇಶನಕ್ಕೆ ಖಾತೆ ಮಾಡಿಸಿಕೊಡುವಂತೆ ಕೇಳಿದಾಗ ಇಲ್ಲದ ಸಬೂಬುಗಳನ್ನ ಹೇಳಿ ವಿಳಂಬ ಮಾಡಿದ್ದಾರೆ.ಶಂಕೆಗೆ ಕಾರಣಾದ ಹಿನ್ನಲೆ ವೆಂಕಟರಾಜು ರವರು ಮುಡಾ ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ತೆರಳಿ ಸೋಮಸುಂದರ್ ನೀಡಿರುವ ದಾಖಲೆಗಳನ್ನ ಪರಿಶೀಲನೆ ನಡೆಸಿದಾಗ ನಕಲಿ ಎಂದು ಖಚಿತವಾಗಿದೆ.
ತಮ್ಮ ಹಣ ಹಿಂದಿರುಗಿಸುವಂತೆ ವೆಂಕಟರಾಜು ಒತ್ತಡ ಹೇರಿದ್ದಾರೆ.ದಿನೇಶ್ ಹಾಗೂ ವೆಂಕಟರಾಜು ರನ್ನ ಖಾಸಗಿ ಹೋಟೆಲ್ ಒಂದಕ್ಕೆ ಕರೆಸಿ ಧಂಕಿ ಹಾಕಿದ್ದಾರೆ.ನಿವೃತ್ತ ಡಿವೈಎಸ್ಪಿ ಸಮ್ಮುಖದಲ್ಲಿ ದಿನೇಶ್ ಗೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆಂದು ವೆಂಕಟರಾಜು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.ಈ ಹಿನ್ನಲೆ ಸೋಮಸುಂದರ್ ಹಾಗೂ ವಿಜಯ್ ಕುಮಾರ್ ವಿರುದ್ದ FIR ದಾಖಲಾಗಿದೆ…