ಒಂದೆಡೆ ಮಹಿಷ ದಸರಾಗೆ ಪರ ವಿರೋಧ…ಮತ್ತೊಂದೆಡೆ ಮಹಿಷ ಪ್ರತಿಮೆಗೆ ಬಣ್ಣ ಲೇಪನ ಕಾರ್ಯ…
- TV10 Kannada Exclusive
- October 9, 2023
- No Comment
- 285
ಮೈಸೂರು,ಅ9,Tv10 ಕನ್ನಡ
ಒಂದೆಡೆ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವಿಚಾರದಲ್ಲಿ ಪರ ವಿರೋಧಗಳು ವ್ತಕ್ತವಾಗುತ್ತಿದೆ.ಮತ್ತೊಂದೆಡೆ ಜಿಲ್ಲಾಡಳಿತ ಸೈಲೆಂಟಾಗಿ ಮಹಿಷನ ಪ್ರತಿಮೆಗೆ ಬಣ್ಣ ಲೇಪನ ಕಾರ್ಯ ನಡೆಸುತ್ತಿದೆ.ಪ್ರಗತಿಪರರು ಮಹಿಷ ದಸರಾ ಆಚರಣೆ ಮಾಡುವುದಾಗಿ ಪಟ್ಟು ಹಿಡಿದು ಕಾರ್ಯಕ್ರಮ ಪಟ್ಟಿ ಸಿದ್ದಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರನ್ನ ಆಹ್ವಾನಿಸಿದ್ದಾರೆ.ಮತ್ತೊಂದೆಡೆ ಸಂಪ್ರದಾಯವಾದಿಗಳು ಮಹಿಷ ದಸರಾ ಆಚರಣೆಯನ್ನ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ.ಇಬ್ಬರ ಹಗ್ಗ ಜಗ್ಗಾಟ ಮಧ್ಯೆ ಮಹಿಷ ಪ್ರತಿಮೆಗೆ ಬಣ್ಣ ಲೇಪನ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಮಹಿಷನ ಪ್ರತಿಮೆಗೆ ಬಣ್ಣ ಬಳಿಯಲು ಜಿಲ್ಲಾಡಳಿತ ಪ್ರತಿಮೆಗೆ ಬಟ್ಟೆ ಸುತ್ತಿದೆ.
ಪ್ರತಿ ವರ್ಷ ದಸರಾ ಉದ್ಘಾಟನೆಗೂ ಮುನ್ನ ಪ್ರತಿಮೆಗೆ ಬಣ್ಣ ಬಳಿಯಲಾಗುತ್ತದೆ.
ಧೂಳಿನಿಂದ ರಕ್ಷಿಸಲು ಪ್ರತಿಮೆಗೆ ಆಡಳಿತ ಮಂಡಳಿ ಬಟ್ಟೆ ಸುತ್ತಿದೆ.
ಅ 13ರಂದು ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮದ ಜಗ್ಗಾಟ ನಡೆಯುತ್ತಿದೆ.ಎರಡೂ ಬಣಗಳು
ಮಹಿಷ ದಸರಾ ಹಾಗೂ ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ಕೋರಿದೆ.ಬಿಜೆಪಿ ಸರ್ಕಾರ ಆಡಳಿತದಲ್ಲಿ ಮಹಿಷ ದಸರಾಗೆ ಹಿನ್ನಡೆಯಾಗಿತ್ತು.ಇದೀಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಷ ದಸರಾ ಅದ್ದೂರಿಯಾಗಿ ಆಚರಿಸಲು ಪ್ರಗತಿಪರರು ಸಜ್ಜಾಗಿದ್ದಾರೆ…