ಸಿಎಂ ಮನೆಗೆ ಕಲ್ಲು ಎಸೆದ ಆರೋಪಿ ಶಿವಮೂರ್ತಿ ನ್ಯಾಯಾಂಗ ಬಂಧನಕ್ಕೆ…
- Crime
- October 11, 2023
- No Comment
- 116
ಮೈಸೂರು,ಅ11,Tv10 ಕನ್ನಡ
ಮೈಸೂರಿನಲ್ಲಿ ಸಿಎಂ ಮನೆಗೆ ಕಲ್ಲು ಎಸೆತ ಪ್ರಕರಣದ
ಆರೋಪಿ ಶಿವಮೂರ್ತಿ ವಿರುದ್ದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಪೊಲೀಸರು
ಆರೋಪಿ ಶಿವಮೂರ್ತಿಯನ್ನ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.ಶಿವಮೂರ್ತಿ
ಆರೋಪಿ ವಿರುದ್ದ 427 353 ಹಾಗೂ ಸೆಕ್ಷನ್ 504 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಲ್ಲು ಎಸೆದು ಮೈಸೂರು ಹೊರವಲಯದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನ
ಸರಸ್ವತಿಪುರಂ ಇನ್ಸಪೆಕ್ಟರ್ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ
ಆರೋಪಿ ಸುಳಿವು ಪತ್ತೆ ಹಚ್ಚಿದ ಪೊಲೀಸರ ತಂಡ
ವಶಕ್ಕೆ ಪಡೆಯಲು ಹೋದಾಗಲು ಪೊಲೀಸರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾನೆ.
ಆರೋಪಿ ಶಿವಮೂರ್ತಿಯಿಂದ ಸಬ್ ಇನ್ಸಪೆಕ್ಟರ್ ಮಹೇಂದ್ರ ಹಾಗೂ ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.
ಸಿನಿಮೀಯ ರೀತಿಯಲ್ಲಿ ಆರೋಪಿ ಶಿವಮೂರ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ರೈತರ ಸಾಲ ಮನ್ನಾ ಮಾಡಿದಂತೆ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ ಪ್ರಕರಣಗಳನ್ನ ಮನ್ನಾ ಮಾಡುವಂತೆ ಮನವಿ ನೀಡಲು ಶನಿವಾರ ಸಿದ್ದರಾಮಯ್ಯ ಮನೆಗೆ ತೆರಳಿದ್ದೆ.ಸಂಜೆ 4 ಗಂಟೆ ಆದರೂ ಸಿದ್ದರಾಮಯ್ಯ ಮನವಿ ಸ್ವೀಕರಿಸಲು ಬರಲಿಲ್ಲ.ಮನೆಗೆ ಕಲ್ಲು ಹೊಡೆದರೆ ಸಿದ್ದರಾಮಯ್ಯ ನನ್ನನ್ನೇ ಕರೆಸಿಕೊಳ್ಳುತ್ತಾರೆ ಎಂದು ಭಾವಿಸಿ ಕಲ್ಲು ಹೊಡೆದಿರುವುದಾಗಿ ಪೊಲೀಸರ ಬಳಿ ಶಿವಮೂರ್ತಿ ಹೇಳಿಕೆ ನೀಡಿದ್ದಾರೆ…