ಮಿನಿ ವಿಧಾನ ಸೌಧದಲ್ಲಿ ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ…ಅಧಿಕಾರಿ ಸಿಬ್ಬಂದಿಗಳಿಗೆ ಖಡಕ್ ಸೂಚನೆ…
- TV10 Kannada Exclusive
- October 14, 2023
- No Comment
- 117

ಮಿನಿ ವಿಧಾನ ಸೌಧದಲ್ಲಿ ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ…ಅಧಿಕಾರಿ ಸಿಬ್ಬಂದಿಗಳಿಗೆ ಖಡಕ್ ಸೂಚನೆ…

ಮೈಸೂರು,ಅ14,Tv10 ಕನ್ನಡ

ಮೈಸೂರು ಮಿನಿ ವಿಧಾನಸೌಧ ತಹಸೀಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ವಿವಿದ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳ ಸಮ್ಮುಖದಲ್ಲಿ ಅಹವಾಲು ಸ್ವೀಕರಿಸಿದರು.ಒಟ್ಟು 9 ಅರ್ಜಿಗಳನ್ನ ಸ್ವೀಕರಿಸಲಾಗಿದ್ದು ಸಂಭಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರವಾನಿಸಿ ಪಾಲನಾ ವರದಿ ಸಲ್ಲಿಸುವಂತೆ ಸೂಚಿಸಿದರು.ಡಿವೈಎಸ್ಪಿಗಳಾದ ವಿ.ಕೃಷ್ಣಯ್ಯ ಹಾಗೂ ಮಾಲತೇಶ್ ನೇತೃತ್ವದಲ್ಲಿ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.ಸಾರ್ವಜನಿಕರು ದೂರು ನೀಡಲು ಬಂದಾಗ ಸಮಾಧಾನದಿಂದ ಉತ್ತರಿಸಿ ಅವರ ಸಮಸ್ಯೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಿಮ್ಮಗಳ ವಿರುದ್ದ ದೂರು ಬಾರದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು.ಸಮಸ್ಯೆ ಬಗೆಹರಿಸಲು ಕಾನೂನಿನಲ್ಲಿ ಅವಕಾಶ ಇಲ್ಲದಿದ್ದಲ್ಲಿ ಹಿಂಬರಹವಾದರೂ ನೀಡಬೇಕು ಎಂಬ ಹಲವು ನಿಯಮಗಳನ್ನ ಪಾಲಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಇನ್ಸ್ಪೆಕ್ಟರ್ ಗಳಾದ ಜಯರತ್ನ,ರೂಪಶ್ರೀ,ಉಮೇಶ್,ರವಿಕುಮಾರ್ ಹಾಗೂ ಸಿಬ್ಬಂದಿಗಳಾದ ಪ್ರಕಾಶ್,ಕಾಂತರಾಜು,ಆಶಾ,ತ್ರಿವೇಣಿ,ನೇತ್ರಾವತಿ,ಮೋಹನ್ ಗೌಡ,ಮೋಹನ,ಲೋಕೇಶ್,ಶೇಖರ್,ಸುಂದರೇಶ್,ಪ್ರತೀಕ್ ಹಾಜರಿದ್ದರು…