ಸರಣಿ ಅಪಘಾತ…ಹೊತ್ತಿ ಉರಿದ ಕಾರು…ಮಂಡ್ಯ ಎಸ್ಪಿ ವಾಹನಕ್ಕೂ ಢಿಕ್ಕಿ…
- Crime
- October 14, 2023
- No Comment
- 318






ಮಂಡ್ಯ,ಅ14,Tv10 ಕನ್ನಡ
ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಭೀಕರ
ಸರಣಿ ಅಪಘಾತವಾಗಿದೆ.ಘಟನೆಯಲ್ಲಿ ಕಾರು ಹೊತ್ತಿ ಉರಿದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗೌರಿಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಅತೀವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಕಾರು ಹೊತ್ತಿ ಉರಿದಿದೆ.ಗ್ಲಾಸ್ ಗಳನ್ನ ಹೊಡೆದು
ಕಾರಿನಲ್ಲಿ ಇದ್ದವರನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.ಇದೇ ವೇಳೆ ಮಂಡ್ಯ ಎಸ್ ಪಿ ವಾಹನಕ್ಕೂ ಕಾರಿಗೂ ಅಪಘಾತವಾಗಿದೆ.ಮಂಡ್ಯ ಎಸ್ಪಿ ಸತೀಶ್ ರವರು
ಶ್ರೀರಂಗಪಟ್ಟಣ ಕಡೆಗೆ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…