ಬ್ಯಾಂಕ್ ಚೆಲನ್ ಫೋರ್ಜರಿ… ಮುಡಾ ಗೆ ಉಂಡೆನಾಮ ಇಟ್ಟ ಭೂಪರು..ಖಾತಾ ವರ್ಗಾವಣೆಗಾಗಿ ಧೋಖಾ…5 ಮಂದಿ ವಿರುದ್ದ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲು…
- CrimeMysore
- November 8, 2023
- No Comment
- 288
ಮೈಸೂರು,ನ8,Tv10 ಕನ್ನಡ
ಬ್ಯಾಂಕ್ ಆಫ್ ಬರೋಡ ದ ಚೆಲನ್ ಗಳನ್ನ ಫೋರ್ಜರಿ ಮಾಡಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಉಂಡೆನಾಮ ಇಟ್ಟ ಭಾರಿ ಗೋಲ್ ಮಾಲ್ ಪ್ರಕರಣ ಬೆಳಕಿಗೆ ಬಂದಿದೆ.ಖಾತಾ ವರ್ಗಾವಣೆಗಾಗಿ ಅರ್ಜಿದಾರರು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿರುವ ಬ್ಯಾಂಕ್ ಆಫ್ ಬರೋಡದಲ್ಲಿ ಹಣ ಪಾವತಿಸಿದಂತೆ ಚೆಲನ್ ಗಳನ್ನ ಸೃಷ್ಟಿಸಿ ದೋಖಾ ಮಾಡಿರುವ ಶಾಕಿಂಗ್ ನ್ಯೂಸ್ ಇದಾಗಿದೆ.ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಮುಡಾ ವಲಯ ಕಚೇರಿ 3 ಮತ್ತು 5 ಎ & 5 ಬಿ ಯ ವಿಶೇಷ ತಹಸೀಲ್ದಾರ್ ರವರು ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಖಾಸಗಿ ಬಡಾವಣೆಗಳ ಇ ಖಾತಾ ವರ್ಗಾವಣೆಗಾಗಿ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ.ಅರ್ಜಿದಾರರಿಗೆ ಬ್ಯಾಂಕ್ ಆಫ್ ಬರೋಡದಲ್ಲಿ ಹಣ ಪಾವತಿಸುವಂತೆ ಚೆಲನ್ ಗಳನ್ನ ನೀಡಲಾಗಿದೆ.ಸದರಿ ಅರ್ಜಿದಾರರು ಹಣ ಪಾವತಿಸಿದ ಚೆಲನ್ ಗಳನ್ನ ಅಗತ್ಯ ದಾಖಲೆಗಳೊಂದಿಗೆ ಸಂಭಂಧಪಟ್ಟ ಕಚೇರಿಗೆ ಸಲ್ಲಿಸಿದ್ದಾರೆ.ನಂತರ ಖಾತಾ ವರ್ಗಾವಣೆಯೂ ಆಗಿದೆ.ನಿಯಮಾನುಸಾರ ದಾಖಲೆಗಳನ್ನ ಪರಿಶೀಲಿಸಿದಾಗ ಹಣ ಪಾವತಿಯಾಗಿರುವುದಿಲ್ಲ.ಅರ್ಜಿದಾರರು ನೀಡಿದ ಚೆಲನ್ ಗಳನ್ನ ಪರಿಶೀಲಿಸಿದಾಗ ನಕಲು ಎಂದು ಖಚಿತವಾಗಿದೆ.ಚೆಲನ್ ಮೇಲೆ ಬ್ಯಾಂಕ್ ಆಫ್ ಬರೋಡಾದ ನಕಲಿ ಮೊಹರು ಕಂಡು ಬಂದಿದೆ.ಸಧ್ಯಕ್ಕೆ 5 ಅರ್ಜಿದಾರರಿಂದ ವಂಚನೆ ಆಗಿರುವುದು ಬೆಳಕಿಗೆ ಬಂದಿದೆ.
ಎಂ.ಎಸ್.ಮೋಹನ್ ಕುಮಾರ್ ಎಂಬುವರು ರೂ8050/-, ಗಾಲಿ ಆನಂದ ರೆಡ್ಡಿ ಎಂಬುವರು ರೂ8279/-,ಆರ್.ಯೋಗೇಶ್ ಪ್ರಸಾದ್ ಎಂಬುವರು ರೂ.8800/- ,ವಿ.ಆರ್.ಗಿರೀಶ್ ಎಂಬುವರು ರೂ.16899/- ಹಾಗೂ ಸಿ.ಡಿ.ವೇಣುಗೋಪಾಲ್ ಎಂಬುವರು ರೂ.40,050/- ರೂ ಮೌಲ್ಯದ ನಕಲಿ ಚೆಲನ್ ಗಳನ್ನ ನೀಡಿ ಪ್ರಾಧಿಕಾರಕ್ಕೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ರೀತಿ ಪ್ರಕರಣಗಳು ವಲಯ ಕಚೇರಿ 6 ರಲ್ಲೂ ಸಹ ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬ್ಯಾಂಕ್ ಚೆಲನ್ ಗಳನ್ನೇ ನಕಲಿ ಮಾಡಿರುವ ಭೂಪರ ಬಗ್ಗೆ ಪೊಲೀಸರು ಖಡಕ್ ತನಿಖೆ ನಡೆಸಬೇಕಿದೆ.ಅರ್ಜಿದಾರರ ಜೊತೆಗೆ ಪ್ರಾಧಿಕಾರದ ಸಿಬ್ಬಂದಿಗಳು ಹಾಗೂ ಬ್ಯಾಂಕ್ ಆಫ್ ಬರೋಡಾದ ನೌಕರರು ಭಾಗಿಯಾಗಿದ್ದಾರೆಯೇ ಎಂಬುದನ್ನೂ ಸಹ ಪೊಲೀಸರು ಬೆಳಕಿಗೆ ತರಬೇಕಿದೆ…