ನಾಲ್ವಡಿ ಕೃಷ್ಣರಾಜ ಕನ್ವೆನ್ಷನ್ ಹಾಲ್ ಸೀಜ್…Tv10 ಕನ್ನಡ ವಾಹಿನಿ ವರದಿ ಎಫೆಕ್ಟ್…ಗುತ್ತಿಗೆ ಹಣ ಬಾಕಿ ಹಿನ್ನಲೆ ಮುಡಾದಿಂದ ಕ್ರಮ…
- TV10 Kannada Exclusive
- November 16, 2023
- No Comment
- 949
ಮೈಸೂರು,ನ16,Tv10 ಕನ್ನಡ
55 ಲಕ್ಷ ಗುತ್ತಿಗೆ ಹಣ ಬಾಕಿ ಇದ್ದರೂ ಎರಡು ವರ್ಷಕ್ಕೆ ಗುತ್ತಿಗೆ ನವೀಕರಿಸಿದ್ದ ನಾಲ್ವಡಿ ಕೃಷ್ಣರಾಜ ಕನ್ವೆನ್ಷನ್ ಹಾಲ್ ಗೆ ಮುಡಾ ಅಧಿಕಾರಿಗಳು ಬೀಗ ಜಡಿದು ಸೀಜ್ ಮಾಡಿದ್ದಾರೆ. ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದ್ದರೂ ಕುಂಟು ನೆಪವೊಡ್ಡಿ ಗುತ್ತಿಗೆದಾರನಿಗೆ ಅನುಕೂಲ
ಮಾಡಿಕೊಟ್ಟಿದ್ದ ಅಧಿಕಾರಿಗಳ ಬಣ್ಣವನ್ನ Tv10 ಕನ್ನಡ ವಾಹಿನಿ ವರದಿ ಮಾಡಿತ್ತು.ಈ ಸಂಭಂಧ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಮಾಹಿತಿ ಹಕ್ಕಿನ ಮೂಲಕ ದಾಖಲೆಗಳನ್ನ ಪಡೆದು ಅಧಿಕಾರಿಗಳ ಬಣ್ಣ ಬಯಲು ಮಾಡಿದ್ದರು.Tv10 ವರದಿ ನಂತರ ಎಚ್ಚೆತ್ತ ಮುಡಾ ಅಧಿಕಾರಿಗಳು ಕಲ್ಯಾಣ ಮಂಟಪ ಸೀಜ್ ಮಾಡಿದ್ದಾರೆ
ಮೈಸೂರಿನ ಹೆಬ್ಬಾಳ್ ಬಡಾವಣೆಯ ಮುಖ್ಯರಸ್ತೆಯಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುಸಜ್ಜಿತ ನಾಲ್ವಡಿ ಕೃಷ್ಣರಾಜ ಕನ್ವೆನ್ಷನ್ ಹಾಲ್ ಗುತ್ತಿಗೆಯನ್ನ ಬೆಂಗಳೂರಿನ ನಿವಾಸಿ ಸರ್ಕಾರ್ ಕನ್ಸ್ಟ್ರಕ್ಷನ್ಸ್ ಮಾಲೀಕ ಸಿದ್ದರಾಜಪ್ಪ ಎಂಬುವರಿಗೆ ವಾರ್ಷಿಕ 35 ಲಕ್ಷಗಳಂತೆ 5 ವರ್ಷದ ಅವಧಿಗೆ 2019 ರ ಸಾಲಿನಲ್ಲಿ ಗುತ್ತಿಗೆ ನೀಡಲಾಗಿತ್ತು.ಕೊರೊನಾ ಕಾರಣ 2020-21 ಹಾಗೂ 2021-22 ಈ ಎರಡು ವರ್ಷಗಳ ಗುತ್ತಿಗೆ ಹಣ ಮನ್ನಾ ಮಾಡಲಾಗಿತ್ತು.ಉಳಿದಂತೆ ವರ್ಷಕ್ಕೆ ಸಿದ್ದರಾಜಪ್ಪ ವರ್ಷಕ್ಕೆ 35 ಲಕ್ಷ ಪಾವತಿಸಬೇಕಿತ್ತು.ಕರೋನಾದ ಎರಡು ವರ್ಷಗಳ ಗುತ್ತಿಗೆ ಹಣ ಮನ್ನಾ ಹೊರತು ಪಡಿಸಿ ಉಳಿದ ಅವಧಿಗೆ ಸಿದ್ದರಾಜಪ್ಪ ಬಡ್ಡಿ ಸಮೇತ 55 ಲಕ್ಷ ಬಾಕಿ ಉಳಿಸಿಕೊಂಡಿದ್ದಾರೆ.ಇಲ್ಲಿ ಮದುವೆಗೆ 1.5 ಲಕ್ಷ ವಸೂಲಿ ಮಾಡಲಾಗುತ್ತದೆ.ಅಲ್ಲದೆ ಮದುವೆ ಇಲ್ಲದ ದಿನಗಳಲ್ಲಿ ವಸ್ತುಪ್ರದರ್ಶನಗಳಿಗೆ ಅನುಮತಿ ನೀಡಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ.ಇಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯುತ್ತಲೇ ಇದೆ.ಹೀಗಿದ್ದೂ ಸಿದ್ದರಾಜಪ್ಪ 55 ಲಕ್ಷ ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದ್ದಾರೆ.ಗುತ್ತಿಗೆ ಹಣ ಪಾವತಿಸುವಂತೆ ವಲಯ 4 ರ AEE ಸಂಪತ್ ಕುಮಾರ್ ಹಲವು ಬಾರಿ ನೋಟೀಸ್ ಜಾರಿ ಮಾಡಿದ್ದಾರೆ.ನೋಟೀಸ್ ಗೆ ಕ್ಯಾರೆ ಎನ್ನದ ಸಿದ್ದರಾಜಪ್ಪ ಒಂದು ನಯಾಪೈಸೆ ಪಾವತಿಸಿಲ್ಲ.ಹೀಗಿದ್ದೂ ಮುಡಾ ಅಧಿಕಾರಿಗಳು ಎರಡು ವರ್ಷ ಹೆಚ್ಚುವರಿಯಾಗಿ ಗುತ್ತಿಗೆಯನ್ನ ನವೀಕರಿಸಿಕೊಟ್ಟಿದ್ದಾರೆ. 55 ಲಕ್ಷ ಬಾಕಿ ಇರುವಾಗ ನವೀಕರಿಸುವ ದರ್ದು ಏನಿದೆ.ಸಿದ್ದರಾಜಪ್ಪ ಶಾಸಕರೊಬ್ಬರ ಸಂಭಂಧಿ ಎಂದು ಹೇಳಲಾಗಿದ್ದು ಪ್ರಭಾವಕ್ಕೆ ಮುಡಾ ಅಧಿಕಾರಿಗಳು ಮಣಿದರೇ..? ಎಂದು ಪ್ರಶ್ನಿಸಿ Tv10 ವಾಹಿನಿಯಲ್ಲಿ ವರದಿ ಮಾಡಲಾಗಿತ್ತು.ವರದಿಗೆ ಎಚ್ಚೆತ್ತ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ಕ್ರಮ ಕೈಗೊಂಡಿದ್ದಾರೆ.ಕನ್ವೆನ್ಷನ್ ಹಾಲ್ ಸೀಜ್ ಮಾಡಿದ್ದಾರೆ.ಇದು Tv10 ವರದಿಯ ಇಂಪ್ಯಾಕ್ಟ್ ಆಗಿದೆ.ಗುತ್ತಿಗೆದಾರನ ಜೊತೆ ಶಾಮೀಲಾದ ಮುಡಾ ಅಧಿಕಾರಿಗಳ ಬಣ್ಣ ಬಯಲು ಮಾಡಿದ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಹೋರಾಟಕ್ಕೆ ಸಂದ ಜಯವಾಗಿದೆ.
ಮುಡಾ ಆಯುಕ್ತ ದಿನೇಶ್ ಕುಮಾರ್ ಆದೇಶದ ಮೇರೆಗೆ ವಲಯ 4 ರ AEE ಸಂಪತ್ ಕುಮಾರ್,ಮುಡಾ ವಿಶೇಷ ತಹಸೀಲ್ದಾರ್ ರಾಜಶೇಖರ್,ಆರ್.ಐ.ಮಂಜುನಾಥ್,AE ಪವಿತ್ರ ಹಾಗೂ ಸಿಬ್ಬಂದಿಗಳಾದ ಪ್ರವೀಣ್ ಪಾಪಣ್ಣ,ಅವಿನಾಶ್ ಲೋಕೇಶ್ ರವರು ಸೀಜ್ ಕಾರ್ಯಾಚರಣೆ ನಡೆಸಿದ್ದಾರೆ…