ಕೌಟುಂಬಿಕ ಕಲಹ ಹಿನ್ನಲೆ…ಪತಿ ನೇಣಿಗೆ ಶರಣು…
- Crime
- November 16, 2023
- No Comment
- 262
ನಂಜನಗೂಡು,ನ16,Tv10 ಕನ್ನಡ
ಕೌಟುಂಬಿಕ ಕಲಹಕ್ಕೆ ಮನನೊಂದು ಪತಿ ನೇಣಿಗೆ ಶರಣಾಗಿರುವ ಘಟನೆ ನಂಜನಗೂಡು ತಾಲೂಕಿನ ವರುಣ ವಿಧಾನಸಭಾ ಕ್ಷೇತ್ರದ ಹದಿನಾರು ಮೋಳೆ ಗ್ರಾಮದಲ್ಲಿ ನಡೆದಿದೆ.
ಮಾದೇಶ್(34) ಮೃತ ದುರ್ಧೈವಿಯಾಗಿದ್ದಾನೆ.
ಗಂಡ, ಹೆಂಡತಿ ನಡುವೆ ಆಗಾಗಲಾಟೆ ನಡೆಯುತ್ತಿತ್ತು. ಈ ಬಗ್ಗೆ ಗ್ರಾಮದಲ್ಲಿ ನ್ಯಾಯ ಪಂಚಾಯಿತಿಯನ್ನು ಮಾಡಲಾಗಿತ್ತು.ಹೀಗಿದ್ದೂ ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲವೆಂದು ಹೇಳಲಾಗಿದೆ.ಇದರಿಂದಾಗಿ ಮನನೊಂದು ಮಾದೇಶ್ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೂಡಲೇ ನಂಜನಗೂಡು ಗ್ರಾಮಾಂತರ ಪೊಲೀಸರಿಗೆ ಸ್ಥಳೀಯರು ಮಾಹಿತಿ ತಿಳಿಸಿದ್ದಾರೆ. ಪಿಎಸ್ಐ ಕೆ.ಗೋಪಾಲ್ ಕೃಷ್ಣ, ಸಿಬ್ಬಂದಿಗಳಾದ ಬರ್ಮಪ್ಪ, ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…