ಮಂಡ್ಯ:ಕಾಡಾನೆ ದಾಳಿ…ರೈತ ಮಹಿಳೆ ಸಾವು..
- Crime
- November 19, 2023
- No Comment
- 292

ಮಂಡ್ಯ,ನ19,Tv10 ಕನ್ನಡ

ಕಾಡಾನೆ ತುಳಿತಕ್ಕೆ ರೈತ ಮಹಿಳೆ ಬಲಿಯಾದ ಘಟನೆ
ಮಂಡ್ಯ ತಾಲ್ಲೂಕಿನ ಲಾಳನಕೆರೆ-ಪೀಹಳ್ಳಿ ನಡುವೆ ನಡೆದಿದೆ.
ಲಾಳನಕೆರೆ ಗ್ರಾಮದ ಸಾಕಮ್ಮ(40) ಮೃತ ರೈತ ಮಹಿಳೆ.
ಬೆಳಗ್ಗೆ ಜಮೀನಿನ ಬಳಿ ಹೋಗಿದ್ದ ವೇಳೆ
ಒಂಟಿ ಆನೆ ದಾಳಿಗೆ ಸಾಕಮ್ಮ ಸಿಲುಕಿ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆನೆ ದಾಳಿಯಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…