ಭೂಮಿ ಕಳೆದುಕೊಂಡ ರೈತನಿಗೆ ಉದ್ಯೋಗ ನೀಡದ ಕಂಪನಿ…ಡೆತ್ ನೋಟ್ ಬರೆದು ಅನ್ನದಾತ ಆತ್ಮಹತ್ಯೆ…
- Crime
- November 20, 2023
- No Comment
- 633


ನಂಜನಗೂಡು,ನ20,Tv10 ಕನ್ನಡ
KIADB ಗೆ ಭೂಮಿ ನೀಡಿದ ರೈತನಿಗೆ ಕೊಟ್ಟ ಮಾತಿನಂತೆ ಉದ್ಯೋಗ ನೀಡದ ಖಾಸಗಿ ಕಂಪನಿ ವಂಚಿಸಿದ ಆರೋಪದ ಹಿನ್ನಲೆ ಅನ್ನದಾತ ಡೆತ್ ನೋಟ್ ಬರೆದು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ನಂಜನಗೂಡು ತಾಲೂಕು ಅಡಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕಂಪನಿ ಅಧಿಕಾರಿಗಳ ದುಂಡಾವರ್ತನೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ ರೈತ ಸಿದ್ದರಾಜು(28).
ಸರ್ವೆ ನಂ 96/1 ರಲ್ಲಿ ಸಿದ್ದರಾಜು ಕುಟುಂಬಕ್ಕೆ ಸೇರಿದ ಜಮೀನುಗಳನ್ನ KIADB ಸ್ವಾಧೀನಪಡಿಸಿಕೊಂಡಿದೆ.ಈ ವೇಳೆ ಭೂಮಿ ನೀಡಿದ ಕುಟುಂಬದವರಿಗೆ ಉದ್ಯೋಗ ನೀಡುವ ಭರವಸೆ ನೀಡಿತ್ತು.ಸಿದ್ದರಾಜು ರವರ ಜಮೀನಿನಲ್ಲಿ ಪಾರ್ಲೆ ಆಗ್ರೋ ಪ್ರೈ.ಲಿ.ಕಂಪನಿ ತಲೆ ನಿರ್ಮಾಣವಾಗಿದೆ.ಕೊಟ್ಟ ಮಾತಿನಂ ಪಾರ್ಲೆ ಆಗ್ರೋ ಪ್ರೈ.ಲಿ.ನಲ್ಲಿ ಸಿದ್ದರಾಜು ಗೆ ಖಾಯಂ ಉದ್ಯೋಗ ದೊರೆತಿಲ್ಲ.ಕಳೆದ 4 ವರ್ಷಗಳಿಂದ ಉದ್ಯೋಗಕ್ಕಾಗಿ ಸಿದ್ದರಾಜು ಅಲೆದಾಡಿದ್ದಾರೆ.KIADB ಸಂಸ್ಥೆ ಅಧಿಕಾರಿಗಳು ಸಹ ಕಂಪನಿ ಮುಖ್ಯಸ್ಥರಿಗೆ ಉದ್ಯೋಗ ನೀಡುವಂತೆ ಆದೇಶಿಸಿದ್ದಾರೆ.ಹೀಗಿದ್ದರೂ ಸಿದ್ದರಾಜು ಗೆ ಉದ್ಯೋಗ ಲಭಿಸಿಲ್ಲ.ಈ ಮಧ್ಯೆ ಉದ್ಯೋಗಕ್ಕಾಗಿ ಸಾಕಷ್ಟು ಭಾರಿ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.ಯಾವುದಕ್ಕೂ ಜಗ್ಗದ ಕಾರ್ಖಾನೆ ಮುಖ್ಯಸ್ಥರು ಸಿದ್ದರಾಜು ಮನವಿಯನ್ನ ತಿರಸ್ಕರಿಸಿದ್ದಾರೆ.ಇದರಿಂದ ಬೇಸತ್ತ ಸಿದ್ದರಾಜು ನಿನ್ನೆ ಕುಟುಂದವರೆಲ್ಲಾ ಮಹದೇಶ್ವರನ ಬೆಟ್ಟಕ್ಕೆ ತೆರಳಿದ ವೇಳೆ ಡೆತ್ ನೋಟ್ ಬರೆದು ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಡೆತ್ ನೋಟ್ ನಲ್ಲಿ ಕಂಪನಿ ನೀಡಿದ ಕಿರುಕುಳವನ್ನ ಸವಿವರವಾಗಿ ಬರೆದು ನನ್ನ ಸಾವಿಗೆ ಪ್ಲಾಂಟ್ ಹೆಡ್ ರಾಮಪ್ರಸಾದ್ ಹಾಗೂ HR ಮುಷೀದ್ ಉಲ್ಲಾ ಖಾನ್ ಎಂದು ಉಲ್ಲೇಖಿಸಿ ನೇಣಿಗೆ ಶರಣಾಗಿದ್ದಾರೆ.ಇಬ್ಬರಿಗೂ ಶಿಕ್ಷೆ ನೀಡಿ ನ್ಯಾಯ ಕೊಡಿಸಬೇಕೆಂದು ಡೆತ್ ನೋಟ್ ನಲ್ಲಿ ಮನವಿ ಮಾಡಿದ್ದಾರೆ.ಡೆತ್ ನೋಟ್ ಆಧಾರದಂತೆ ನಂಜನಗೂಡು ಗ್ರಾಮಾಂತರ ಪೊಲೀಸರು ಪ್ಲಾಂಟ್ ಹೆಡ್ ರಾಮಪ್ರಸಾದ್ ಹಾಗೂ HR ಮುಷೀದ್ ಉಲ್ಲಾ ಖಾನ್ ವಿರುದ್ದ FIR ದಾಖಲಿಸಿದ್ದಾರೆ…