ಮದುವೆಗೆಂದು ಕೊಟ್ಟ ಸಾಲ ಕೇಳಿದ್ದೇ ತಪ್ಪಾಯ್ತು…ಯುವತಿಗೆ ಮೊಚ್ಚಿನಿಂದ ಹಲ್ಲೆ…ಅಸಭ್ಯ ವರ್ತನೆ…5 ಮಂದಿ ವಿರುದ್ದ FIR…
- Crime
- November 20, 2023
- No Comment
- 433
ಹುಣಸೂರು,ನ20,Tv10 ಕನ್ನಡ
ಮದುವೆಗಾಗಿ ಕೊಟ್ಟ ಸಾಲ ಹಿಂದಿರುಗಿಸುವಂತೆ ಕೇಳಿದ ತಾಯಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಮೊಚ್ಚಿನಿಂದ ಹೊಡೆದು ಕೊಲೆ ಯತ್ನ ನಡೆಸಿದ ಘಟನೆ ಹುಣಸೂರು ತಾಲೂಕು ಗಂಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ ಯುವತಿ ಸಂಗೀತಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಗಂಗೇನಹಳ್ಳಿಯ ಸೀನಾ,ಶಂಕರ,ಮಂಚಮ್ಮ,ಬೋರಮ್ಮ ಹಾಗೂ ದೇವರಾಜ್ ಎಂಬುವರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಮದುವೆಗಾಗಿ ಸೀನಾ ಎಂಬುವರಿಗೆ ರಾಧ 50 ಸಾವಿರ ಸಾಲ ಕೊಟ್ಟಿದ್ದರು.ಮದುವೆ ಮುಗಿದ ಒಂದು ತಿಂಗಳಲ್ಲಿ ಸಾಲ ಹಿಂದಿರುಗಿಸುವುದಾಗಿ ಸೀನಾ ಹೇಳಿದ್ದು.ಆದರೆ ಸಾಲ ಹಿಂದಿರುಗಿಸಲಿಲ್ಲ.ಆಗಾಗ ಸಾಲ ಕೊಟ್ಟ ರಾಧ ಮನೆಗೆ ಬಂದು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು.ನಿನ್ನೆ ಸಹ ಮನೆ ಹತ್ತಿರ ಬಂದು ಹಣ ಕೇಳಿದಾಗ ಐವರು ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ.ರಾಧಾ ರನ್ನ ಎಳೆದಾಡಿದ್ದಾರೆ.ಈ ವೇಳೆ ರಕ್ಷಣೆಗೆ ಬಂದ ಮಗಳು ಸಂಗೀತಾ ಮೇಲೆ ಮೊಚ್ಚಿನಿಂದ ಹಲ್ಲೆ ನಡೆಸಿದ್ದಾರೆ.ಸಂಗೀತಾಗೆ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.5 ಆರೋಪಿಗಳ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…