ಮತದಾನದಲ್ಲಿ ಯುವ ಮತದಾರರ ಮಹತ್ವ ಹೆಚ್ಚಿನದು -ಲಯನ್ ಸಿಆರ್ ದಿನೇಶ್ ಅಭಿಮತ
- TV10 Kannada Exclusive
- November 20, 2023
- No Comment
- 291

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಚಬೇಕು. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಉತ್ತೇಜಿಸುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿ ಮತದಾನ ಸಾಕ್ಷರತಾ ಸಂಘಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಬಹುದು ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ ದಿನೇಶ್ ರವರು ಅಭಿಮತ ವ್ಯಕ್ತಪಡಿಸಿದರು.
ನಂಜನಗೂಡು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮತದಾನದ ಕುರಿತು ರಸಪ್ರಶ್ನೆ, ಭಿತ್ತಿಚಿತ್ರ ಹಾಗೂ ಪ್ರಬಂಧ ಸ್ಪರ್ಧೆಗಳ ಉದ್ಘಾಟನೆ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು .
ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷರಾದ ರಂಗಸ್ವಾಮಿ ಮಾತನಾಡಿ ದೇಶ ಸರ್ವತೋಮುಖ ಬೆಳವಣಿಗೆ ಕಾಣಬೇಕಾದರೆ ಪ್ರತಿಯೊಬ್ಬರು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಹ ಆಡಳಿತಗಾರರನ್ನು ಚುನಾಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ವೆಂದು ಹೇಳಿದರು.
ಉಪನ್ಯಾಸಕ ಡಾ . ಕೆ.ಆರ್ .ರಾಘವೇಂದ್ರ ಮಾತನಾಡಿ ವಿದ್ಯಾರ್ಥಿಗಳು ಮತದಾನದ ಮಹತ್ವ ಮತ್ತು ಸಾರ್ವಜನಿಕರನ್ನು ಯಾವ ರೀತಿಯಲ್ಲಿ ಮತದಾನದಲ್ಲಿ ಪ್ರೇರಣೆ ಮಾಡಬೇಕು ಎಂದು ಮಾಹಿತಿಯನ್ನು ನೀಡಿದರು .
ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವಥ್ ನಾರಾಯಣ ಗೌಡ, ಡಾ. ರವಿ ಟಿ. ಕೆ, ಯೋಗೀಶ್ ಹೆಚ್ ಎನ್, ಪ್ರಶಾಂತ್ ಕುಮಾರ್ ಕೆ ಎಸ್, ರಾಜೇಶ್ವರಿ, ಭವ್ಯ ಬಾಲಸುಬ್ರಹ್ಮಣ್ಯಂ, ಸಾಯಿರ ಬಾನು ಉಪಸ್ಥಿತರಿದ್ದರು.
ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಹೆಚ್ .ಕೆ. ಸ್ವಾಮಿ ಗೌಡ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕಿನ ವಿವಿಧ ಕಾಲೇಜಿನ ೬೦ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.