ಫುಟ್ ಪಾತ್ ವ್ಯಾಪಾರಿಗೆ ಆಶ್ರಯವಾದ ಕಾವೇರಿ ಕ್ರಿಯಾ ಸಮಿತಿ ಪೆಂಡಾಲ್…ಹೋರಾಟಗಾರರಿಗೆ ಇದು ಬೇಕಿತ್ತೇ…?
- TV10 Kannada Exclusive
- November 22, 2023
- No Comment
- 563

ಮೈಸೂರು,ನ22,Tv10 ಕನ್ನಡ

ಕಾವೇರಿಗಾಗಿ ಹೋರಾಟಗಾರರು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ನಿರಂತರ ಹೋರಾಟದ ಪೆಂಡಾಲ್ ಫುಟ್ ಪಾತ್ ವ್ಯಾಪಾರಿಗೆ ಆಶ್ರಯವಾಗಿದೆ.ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಂಡ ಕಾವೇರಿ ಕ್ರಿಯಾ ಸಮಿತಿ ಯಾವುದೇ ಮುನ್ಸೂಚನೆ ನೀಡದೆ ಹೋರಾಟಕ್ಕೆ ಎಳ್ಳುನೀರು ಬಿಟ್ಟಿದೆ.ಕೆಲವು ದಿನಗಳ ಕಾಲ ಇದೇ ಪೆಂಡಾಲ್ ಕೆಳಗೆ ಕುಳಿತು ತಮಿಳುನಾಡಿಗೆ ನೀರು ಬಿಟ್ಟ ರಾಜ್ಯ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿ ರಕ್ತ ಕೊಟ್ಟೇವು ನೀರು ಬಿಡುವುದಿಲ್ಲವೆಂದು ಗಂಟಾಘೋಷವಾಗಿ ಸಿಡಿದೆದ್ದಿದ್ದ ಹೋರಾಟಗಾರರು ತಣ್ಣಗಾಗಿದ್ದಾರೆ.ತಮಿಳುನಾಡಿಗೆ ನೀರು ಹರಿಯುವುದು ಸ್ಥಗಿತವಾಗದಿದ್ರೂ ಹೋರಾಟ ಮಾತ್ರ ಸ್ಥಗಿತವಾಗಿದೆ.ಪ್ರತಿಭಟನೆ ನಿಲ್ಲಿಸಿದ ಹೋರಾಟಗಾರರು ಕನಿಷ್ಟಪಕ್ಷ ಪೆಂಡಾಲ್ ಹಾಗೂ ಫ್ಲೆಕ್ಸ್ ನಾದ್ರೂ ತೆರುವುಗೊಳಿಸದೆ ತಿಂಗಳಿಂದ ಮೂಕವೇದನೆ ಅನುಭವಿಸಿದೆ.ಸಧ್ಯಕ್ಕಂತೂ ಕಾವೇರಿ ಕ್ರಿಯಾ ಸಮಿತಿ ಹೋರಾಟದ ಪೆಂಡಾಲ್ ಫುಟ್ ಪಾತ್ ವ್ಯಾಪಾರಿಯೊಬ್ಬರಿಗೆ ಆಶ್ರಯ ನೀಡಿದೆ.ರಾತ್ರಿ ವೇಳೆ ಯಾರಿಗೆ ತಾಣವಾಗಲಿದೆ ಗೊತ್ತಿಲ್ಲ.ಇನ್ನಾದರೂ ಕಾವೇರಿ ಕ್ರಿಯಾ ಸಮಿತಿ ಮುಖ್ಯಸ್ಥರು ಇದನ್ನ ಗಮನಿಸಿ ಪೆಂಡಾಲ್ ತೆರುವುಗೊಳಿಸಬೇಕಿದೆ.ಇಲ್ಲದಿದ್ದಲ್ಲಿ ಸಾರ್ವಜನಿಕ ವಲಯದಲ್ಲಿ ಹೋರಾಟದ ಬಗ್ಗೆ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ…