ಹೆಜ್ಜೇನು ದಾಳಿ…30 ಕ್ಕೂ ಹೆಚ್ಚು ಮಂದಿಗೆ ಗಾಯ…ಜಾತ್ರೆ ವೇಳೆ ಘಟನೆ…
- TV10 Kannada Exclusive
- November 22, 2023
- No Comment
- 237

ಹೆಜ್ಜೇನು ದಾಳಿ…30 ಕ್ಕೂ ಹೆಚ್ಚು ಮಂದಿಗೆ ಗಾಯ…ಜಾತ್ರೆ ವೇಳೆ ಘಟನೆ…
ಮೇಲುಕೋಟೆ,ನ22,Tv10 ಕನ್ನಡ
ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಮೇಲುಕೋಟೆ
ತೊಟ್ಟಿಲುಮಡು ಜಾತ್ರೆ ವೇಳೆ ಹೆಜ್ಜೇನು ದಾಳಿ ನಡೆಸಿದ ಪರಿಣಾಮ
30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು
17 ಮಂದಿ ಅಸ್ವಸ್ಥರಾಗಿದ್ದಾರೆ.
ತೊಟ್ಟಿಲುಮಡು ಜಾತ್ರೆಯ ಅಷ್ಟ ತೀರ್ಥೋತ್ಸವ ವೇಳೆ ಘಟನೆ ನಡೆದಿದೆ.
ಅಷ್ಟತೀರ್ಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಭಕ್ತರ ಮೇಲೆ ಹೆಜ್ಜೇನು ದಾಳಿ ನಡೆಸಿದೆ.
ಜೇನುಗೂಡಿದ್ದ ಮರದ ಸಮೀಪವೇ ಭಕ್ತರು ಕರ್ಪೂರ ಹಚ್ಚಿದ್ದಾರೆ.
ಕರ್ಪೂರದ ಹೊಗೆಯಿಂದ ಗೂಡು ಬಿಟ್ಟ ಹೆಜ್ಜೇನು ಭಕ್ತರ ಮೇಲೆ ದಾಳಿ ಮಾಡಿದೆ.
ಹೆಜ್ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಭಕ್ತರು ದಿಕ್ಕಾಪಾಲಾಗಿ ಓಡಿದ್ದಾರೆ.ಹೆಜ್ಜೇನು
ಜೇನುದಾಳಿಗೆ ಒಳಗಾದವರಿಗೆ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗಂಭೀರವಾಗಿ ಗಾಯಗೊಂಡ 17 ಮಂದಿಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ…