ನಿಯಮಾನುಸಾರ ಶೇ 50-50 ಅನುಪಾತದಲ್ಲಿ ಹಂಚಿಕೆಯಾಗದ ನಿವೇಶನ ನೊಂದಣಿಗೆ ಬ್ರೇಕ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ…

ಮೈಸೂರು,ನ22,Tv10 ಕನ್ನಡ

ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಪರಿಹಾರ ನೀಡದೆ ಜಮೀನು ಉಪಯೋಗಿಸಿದ ಪ್ರಕರಣಗಳಲ್ಲಿ ಶೇ.50-50 ಅನುಪಾತದಲ್ಲಿ ನೀಡಿರುವ ನಿವೇಶನಗಳ ಕ್ರಯಪತ್ರ ನೊಂದಣಿಗೆ ಜಿಲ್ಲಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ.20-11-2020 ರಂದು ಮುಡಾದಲ್ಲಿ ನಡೆದ ಸಭೆಯಲ್ಲಿ ವಿಷಯ ಸಂಖ್ಯೆ 5 ರಲ್ಲಿ ಪ್ರಾಧಿಕಾರದ ಬಡಾವಣೆ ಹಾಗೂ ಇತರೆ ಉದ್ದೇಶಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ ಪರಿಹಾರ ನೀಡದೆ ಜಮೀನುವುಪಯೋಗಿಸಿರುವ ಪ್ರಕರಣಗಳಲ್ಲಿ ಶೇ 50-50 ಅನುಪಾತದಲ್ಲಿ ನಿವೇಶನ ನೀಡಲು ತೀರ್ಮಾನಿಸಿ ಅದೇ ನಿರ್ಣಯದಂತೆ 50-50 ಅನುಪಾತದಲ್ಲಿ ನಿವೇಶನ ನೀಡುತ್ತಿರುವುದು ಕಂಡುಬಂದಿರುತ್ತದೆ.

ಸರ್ಕಾರದ ಉಲ್ಲೇಖ ಆದೇಶದಲ್ಲಿ ಶೇ50-50 ಅನುಪಾತದಲ್ಲಿ ನಿವೇಶನ ನೀಡಲು ಕೈಗೊಂಡಿರುವ ನಿರ್ಣಯ ನಿಯಮಬಾಹಿರವೆಂದು ನಿರ್ಧರಿಸಿದ್ದು ಈಗಾಗಲೇ ಹಂಚಿಕದ ಮಾಡಿರುವ ನಿವೇಶನಗಳ ಕ್ರಯಪತ್ರ ನೊಂದಣಿಯನ್ನ ಸ್ಥಗಿತಗೊಳಿಸುವಂತೆ ಮುಡಾ ಉಪನೊಂದಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಡ.ಕೆ.ವಿ.ರಾಜೇಂದ್ರ ಪತ್ರದ ಮೂಲಕ ಸೂಚನೆ ನೀಡಿದ್ದಾರೆ…

Spread the love

Related post

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…
ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ…

ವ್ಯಕ್ತಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ…ಕೆಆರ್ ಎಸ್ ನಲ್ಲಿ ಘಟನೆ… ಮಂಡ್ಯ,ಆ7,Tv10 ಕನ್ನಡ ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಕೊಲೆಯಾಗಿದೆ.ಕೆ ಆರ್ ಎಸ್ ನಲ್ಲಿ ಮಲಗಿದ್ದ ವ್ಯಕ್ತಿ ತಲೆ…

Leave a Reply

Your email address will not be published. Required fields are marked *