ವರುಣಾದಲ್ಲಿ ಚಿರತೆ ಸೆರೆ…ಗ್ರಾಮಸ್ಥರಲ್ಲಿ ಆತಂಕ ದೂರ…
- TV10 Kannada Exclusive
- November 26, 2023
- No Comment
- 319
ವರುಣಾದಲ್ಲಿ ಚಿರತೆ ಸೆರೆ…ಗ್ರಾಮಸ್ಥರಲ್ಲಿ ಆತಂಕ ದೂರ…
ಮೈಸೂರು,ನ26,Tv10 ಕನ್ನಡ
ವರುಣಾ ಹೋಬಳಿ ಮೊಸಂಬಾಯನಹಳ್ಳಿ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.ಮಂಜುನಾಥ್ ಎಂಬುವರ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿಗೆ ಚಿರತೆ ಸೆರೆಯಾಗಿದೆ.ಹಲವು ದಿನಗಳಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ಸಾಕು ಪ್ರಾಣಿಗಳನ್ನ ಹೊತ್ತೊಯ್ದ ಚಿರತೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.ಗ್ರಾಮಸ್ಥರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು.ಸಧ್ಯ ಚಿರತೆ ಬೋನಿಗೆ ಸಿಲುಕಿದೆ.ಆರ್.ಎಫ್.ಓ.ಸುರೇಂದ್ರ,ಡಿ.ಆರ್.ಎಫ್.ಓ.ವಿಜಯ್ ಕುಮಾರ್ ಹಾಗೂ ಸಿಬ್ಬಂದಿ BEAT FORESTER: JAGADISH ರವರು ಸ್ಥಳಕ್ಕೆ ಭೇಟಿ ನೀಡಿ ಸೆರೆಯಾದ ಚಿರತೆಯನ್ನ ಅರಣ್ಯ ಪ್ರದೇಶಕ್ಕೆ ರವಾನಿಸಿದ್ದಾರೆ.ಸಧ್ಯ ಚಿರತೆ ಸೆರೆಯಿಂದ ಗ್ರಾಮಸ್ಥರ ಆತಂಕ ದೂರವಾಗಿದೆ…