ಮೊಣಕಾಲು ಸಮಸ್ಯೆ ಪರಿಹಾರಕ್ಕೆ ರೊಬೋಟಿಕ್ ತ್ರಜ್ಞಾನ ಚಿಕಿತ್ಸೆ…ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆ ಯಲ್ಲಿ ವ್ಯವಸ್ಥೆ…
- TV10 Kannada Exclusive
- November 26, 2023
- No Comment
- 295
ಮೊಣಕಾಲು ಸಮಸ್ಯೆ ಪರಿಹಾರಕ್ಕೆ ರೊಬೋಟಿಕ್ ತ್ರಜ್ಞಾನ ಚಿಕಿತ್ಸೆ…ಮೈಸೂರಿನ ಅವಾಂಟ್ ಬಿಕೆಜಿ ಆಸ್ಪತ್ರೆ ಯಲ್ಲಿ ವ್ಯವಸ್ಥೆ…
ಮೈಸೂರು,ನ26,Tv10 ಕನ್ನಡ
ಮೊಣಕಾಲು ಬದಲಿ ಕಾರ್ಯ ವಿಧಾನದ ಸೂಕ್ತ ನಿರ್ವಹಣೆ ಹಾಗೂ ಪರಿಹಾರ ಕ್ರಮಕ್ಕಾಗಿ ಆಕ್ಸಿಡೈಸ್ಟ್ ಜಿರ್ಕೋ ನಿಯಂ ಇಂಪ್ಲಾಂಟ್‌ನೊಂದಿಗೆ ವಿನ್ಯಾಸ ಗೊಳಿಸಲಾಗಿರುವ ‘ರೋಬೋಟಿಕ್ ನ್ಯಾಚುರಲ್ ನೀ ರೀಪ್ಲೇಸ್ಟೆಂಟ್ (ಎನ್‌ಕೆಆರ್ -ನೈಸರ್ಗಿಕ ಮೊಣಕಾಲು ಬದಲಿ)’ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ತಂತ್ರಜ್ಞಾನವನ್ನು ಮೈಸೂರಿನ ಆವಂಟ್ ಬಿಕೆಜಿ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿದೆ.ಈ ವಿಧಾನ ವನ್ನು ಜಗತ್ತಿನಾದ್ಯಂತ ಕೇವಲ ಶೇ.1ರಷ್ಟು ಶಸ್ತ್ರಚಿಕಿತ್ಸಕರು ಮಾತ್ರ ಅಭ್ಯಾಸ ಮಾಡುತ್ತಿರುವುದಾಗಿ ಆಸ್ಪತ್ರೆಯ ಮುಖ್ಯಸ್ಥರು ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಶನಿವಾರ ನಡೆದ ಸಮಾರಂಭ ದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವಾಂಟ್ ಬಿಕೆಜಿ ಆಸ್ಪತ್ರೆಯ ಅತ್ಯಾಧುನಿಕ ತಂತ್ರಜ್ಞಾನ ಸೇವೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.ಸಂಬಂಧಪಟ್ಟ ವೈದ್ಯಕೀಯ ಉಪ ಕರಣಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಮಂಡ್ಯ ಜಿಲ್ಲಾ ಆರೋಗ್ಯಾ ಧಿಕಾರಿ ಡಾ.ಕೆ.ಮೋಹನ್, ಅವಾಂಟ್ ಬಿಕೆಜಿ ಹಾಸ್ಪಿಟಲ್ಸ್ ವ್ಯವಸ್ಥಾಪಕ ನಿರ್ದೇ ಶಕ ಡಾ.ಟಿ.ಎನ್.ಬಾಲಕೃಷ್ಣಗೌಡ, ಇತರೆ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವಿನೂತನ ವೈದ್ಯಕೀಯ ಸೇವೆ ಬಗ್ಗೆ ವಿವರಿಸಿದ ಡಾ.ಟಿ.ಎನ್.ಬಾಲಕೃಷ್ಣಗೌಡ (ಬಿಕೆಜಿ), ವೈದ್ಯಕೀಯ ಕ್ಷೇತ್ರದಲ್ಲಿನ ಅತ್ಯಾ ಧುನಿಕ ಆವಿಷ್ಕಾರಗಳನ್ನು ಅಳವಡಿಸಿ ಕೊಳ್ಳಲು ನಮ್ಮ ಅವಾಂಟ್ ಬಿಕೆಜಿ ಆಸ್ಪತ್ರೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರೋಬೋ ಟಿಕ್ ಎನ್‌ಕೆಆರ್ ಶಸ್ತ್ರಚಿಕಿತ್ಸಕ ಯಂತ್ರವನ್ನು ಪರಿಚಯಿಸಲಾಗಿದೆ. ಇದು ಮೊಣಕಾಲು ಗಳನ್ನು ಪ್ರಮಾಣಿತ ಪಿಲ್ಲರ್ ಆಕಾರದಲ್ಲಿ ಪುನರ್ ನಿರ್ಮಿಸುವ ಸಾಂಪ್ರದಾಯಿಕ ವಿಧಾನಕ್ಕಿಂತ ವಿಭಿನ್ನವಾಗಿದೆ. ರೋಬೋ ಟಿಕ್ ಎನ್‌ಕೆಆರ್ ಶಸ್ತ್ರಚಿಕಿತ್ಸೆ ಮೂಲಕ ರೋಗಿಗಳ ಮೊಣಕಾಲನ್ನು ನಿಖರವಾಗಿ ಮರುಸೃಷ್ಟಿಸಬಹುದು ಎಂದರು…