ವಾರ್ಡ್ ನಂ 59 ರಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ…ಖಾಲಿ ನಿವೇಶನಗಳ ಸ್ವಚ್ಚತೆಗೆ ಸೂಚನೆ…
- TV10 Kannada Exclusive
- November 29, 2023
- No Comment
- 253
ಮೈಸೂರು,ನ28,Tv10 ಕನ್ನಡ
ಇಂದು ಕುವೆಂಪುನಗರದ ವಾರ್ಡ್ ನಂಬರ್ 59 ರ ವ್ಯಾಪ್ತಿಯ ಕುವೆಂಪುನಗರ ಬಸ್ ಡಿಪೋ,ಕುವೆಂಪುನಗರ ಎಂ.ಬ್ಲಾಕ್, ೨ ನೇ ಹಂತ, ಸುತ್ತಮುತ್ತಲಿನ ಪ್ರದೇಶದಲ್ಲಿ ಕೆ.ಅರ್.ಕ್ಷೇತ್ರದ ಶಾಸಕ ಟಿ.ಎಸ್. ಶ್ರೀ ವತ್ಸ ಪಾದಯಾತ್ರೆ ಕೈಗೊಂಡು ಸ್ಥಳೀಯರ ಸಮಸ್ಯೆಗಳನ್ನ ಪರಿಹರಿಸುವ ಪ್ರಯತ್ನ ನಡೆಸಿದರು.ಪಾದಯಾತ್ರೆ ಯ ವೇಳೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಜರಿದ್ದರು.ಪಾದಯಾತ್ರೆ ವೇಳೆ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ,ಖಾಲಿ ನಿವೇಶನ ಗಳ ಸ್ವಚ್ಚತೆ,ಬೀದಿ ದೀಪಗಳ ಅಳವಡಿಕೆ,ಬೀದಿ,ಪಾರ್ಕ್ ನ ಅಭಿವೃದ್ಧಿ ಸೇರಿದಂತೆ ಹಲವು ಸಮಸ್ಯೆಗಳನ್ನ ಸ್ಥಳೀಯರು ಮುಂದಿಟ್ಟರು. ಸಂಭಂಧಪಟ್ಟ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಿ ಸಮಸ್ಯೆ ಬಗೆ ಹರಿಸುವಂತೆ ತಿಳಿಸಿದರು.ಖಾಲಿ ನಿವೇಶನಗಳ ಸ್ವಚ್ಛತೆಗೆ ಆಧ್ಯತೆ ನೀಡುವುದಾಗಿ ಭರವಸೆ ನೀಡಿದರು…