ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ…ಮಗನ ಕೊಲೆಯಲ್ಲಿ ಅಂತ್ಯ…
- TV10 Kannada Exclusive
- November 29, 2023
- No Comment
- 750
ಮೈಸೂರು,ನ28,Tv10 ಕನ್ನಡ
ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ಶುರುವಾದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.ಉಮೇಜ್(23) ತಂದೆಯ ಕೈಯಿಂದಲೇ ಕೊಲೆಯಾದ ದುರ್ದೈವಿ.ಮಗನ ಕೊಂದ ತಂದೆ ಅಸ್ಲಂಪಾಷ ಇದೀಗ ಪೊಲೀಸರ ಅತಿಥಿ.ತಾಯಿಯ ಮೊಬೈಲ್ ನ ಅನುಮತಿ ಪಡೆಯದೇ ಉವೇಜ್ ಬಳಸಿದ್ದಾನೆ.ಈ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ಶುರುವಾಗಿದೆ.ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಅಸ್ಲಂಪಾಷ ಚಾಕುವಿನಿಂದ ಮಗ ಉವೇಜ್ ಗೆ ಇರಿದು ಕೊಂದಿದ್ದಾನೆ.ಕ್ಷುಲ್ಲಕ ಕಾರಣಕ್ಕೆ ಮಗನನ್ನು ಕೊಂದ ತಂದೆ ಅಸ್ಲಂಪಾಷಾ ರನ್ನ ಎನ್.ಆರ್.ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…