ಜಮೀನು ವಿಚಾರ…ಅಣ್ಣನ ಮಗನಿಂದ ಚಿಕ್ಕಪ್ಪನ ಕೊಲೆ…
- TV10 Kannada Exclusive
- November 30, 2023
- No Comment
- 211
ನಂಜನಗೂಡು,ನ30,Tv10 ಕನ್ನಡ
ಜಮೀನಿನ ವಿಚಾರವಾಗಿ ಅಣ್ಣತಮ್ಮಂದಿರ ನಡುವೆ ಶುರುವಾದ ಜಗಳ ತಮ್ಮ ಕೊಲೆಯಲ್ಲಿ ಅಂತ್ಯವಾಗಿದೆ.ಅಣ್ಣನಮಗನೇ ಚಿಕ್ಕಪ್ಪನನ್ನ ಕೊಂದಿದ್ದಾನೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮರಳ್ಳಿಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಪರಶಿವಪ್ಪ(65) ಮೃತ ದುರ್ದೈವಿ.
ಪರಶಿವಪ್ಪನ ಅಣ್ಣನ ಮಗ ಆದೀಶ್ ಕೊಂದ ಆರೋಪಿ.ಜಮೀನು ವಿಚಾರದಲ್ಲಿ ಪರಶಿವಪ್ಪ ಹಾಗೂ ಅಣ್ಣ ಪ್ರಭುಸ್ವಾಮಿ ನಡುವೆ ಗಲಾಟೆ ನಡೆದಿತ್ತು.ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಭುಸ್ವಾಮಿ ಮಗ ಅದೀಶ್ ಚಿಕ್ಕಪ್ಪನಿಗೆ ಮೊಚ್ಚಿನಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದುಹಾಕಿದ್ದಾನೆ.ತೀವ್ರವಾಗಿ ಗಾಯಗೊಂಡ ಪರಶಿವಪ್ಪರನ್ನ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ಪರಶಿವಪ್ಪ ಮೃತಪಟ್ಟಿದ್ದಾರೆ.ಆರೋಪಿಗಳಾದ ಪ್ರಭುಸ್ವಾಮಿ ಹಾಗೂ ಅದೀಶ್ ತಲೆ ಮರೆಸಿಕೊಂಡಿದ್ದಾರೆ.
ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…