ಮೈಸೂರು:ಹೋಟೆಲ್ ಲೇಡಿ ಕ್ಯಾಶೀಯರ್ ಮೇಲೆ ಅತ್ಯಾಚಾರ…ಬೆತ್ತಲೆ ಫೋಟೋ,ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಕೃತ್ಯ…ಪ್ರತಿಷ್ಠಿತ ಹೋಟೆಲ್ ನಲ್ಲಿ ಘಟನೆ…

  • Crime
  • January 5, 2024
  • No Comment
  • 2053

ಮೈಸೂರು,ಜ4,Tv10 ಕನ್ನಡ

ಮದುವೆ ಆಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ಫೋಟೋ ಹಾಗೂ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ ಘಟನೆ ಮೈಸೂರು ಬೆಂಗಳೂರು ರಸ್ತೆಯ ರಿಂಗ್ ರೋಡ್ ಬಳಿ ಇರುವ ಏಟ್ರಿಯಂ ಹೋಟೆಲ್ ನಲ್ಲಿ ನಡೆದಿದೆ.ಹೋಟೆಲ್ ಮ್ಯಾನೇಜ್ಮೆಂಟ್ ನಡೆಸುವ ಪ್ರೀತಂ ಪುರಾಣಿಕ್ ಮೇಲೆ ಅತ್ಯಾಚಾರ ಆರೋಪ ಮಾಡಲಾಗಿದೆ.ಪ್ರೀತಂ ಪುರಾಣಿಕ್ ಹಾಗೂ ಆತನ ತಂದೆ ಕೃಷ್ಣದಾಸ್ ಪುರಾಣಿಕ್ ಎಂಬುವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಪೊಲೀಸ್ ಠಾಣೆಯಲ್ಲಿ
ನೊಂದ ಯುವತಿ ಪ್ರೇಮಾ(27)(ಹೆಸರು ಬದಲಿಸಲಾಗಿದೆ) ಪ್ರಕರಣ ದಾಖಲಿಸಿದ್ದಾಳೆ.

ಕೆಲವು ವರ್ಷಗಳಿಂದ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ಪ್ರೇಮಾಳ ಜೊತೆ ಸಲುಗೆ ಬೆಳೆಸಿದ ಪ್ರೀತಂ ಪುರಾಣಿಕ್ ಮದುವೆ ಆಗುವುದಾಗಿ ನಂಬಿಸಿ ಬಲೆಗೆ ಹಾಕಿಕೊಂಡಿದ್ದ.ಹೋಟೆಲ್ ನಲ್ಲೇ ಇದ್ದ ಸ್ಪಾ ಒಂದರಲ್ಲಿ ಮದುವೆ ಆದ ಪ್ರೀತಂ ಪುರಾಣಿಕ್ ಯುವತಿಯ ಇಚ್ಛೆಗೆ ವಿರುದ್ದವಾಗಿ ದೈಹಿಕ ಸಂಪರ್ಕ ಬೆಳೆಸಿದ.ಇದರ ಫಲವಾಗಿ ಪ್ರೇಮ ಗರ್ಭವತಿಯಾಗಿದ್ದಳು.ಮದುವೆ ಆಗುವಂತೆ ಒತ್ತಾಯಿಸಿದಾಗ ಬಲವಂತವಾಗಿ ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದ.ನಂತರದ ದಿನಗಳಲ್ಲಿ ಮತ್ತೆ ಮದುವೆ ಆಗುವ ನಾಟಕವಾಡಿ ಪ್ರೇಮಾಳ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ ದೈಹಿಕ ಸಂಪರ್ಕ ಬೆಳೆಸಿದ.ಪ್ರೇಮಾ ಮತ್ತೆ ಗರ್ಭವತಿಯಾಗಿದ್ದಾಳೆ.ಇದೀಗ ಮದುವೆ ಆಗುವಂತೆ ಒತ್ತಾಯಿಸಿದ ವೇಳೆ ಪ್ರೀತಂ ಪುರಾಣಿಕ್ ಹಾಗೂ ತಂದೆ ಕೃಷ್ಣದಾಸ್ ಪುರಾಣಿಕ್ ರವರು ಪ್ರೇಮಾಳಿಗೆ ಜಾತಿ ನಿಂದನೆ ಮಾಡಿ ಹೋಟೆಲ್ ನಿಂದ ಹೊರಗೆ ತಳ್ಳಿದ್ದಾರೆ.ಸಧ್ಯ ಗರ್ಭವತಿಯಾಗಿರುವ ಪ್ರೇಮಾ ತನ್ನನ್ನ ವಂಚಿಸಿದ ಪ್ರೀತಂ ಪುರಾಣಿಕ್ ಹಾಗೂ ಬೆಂಬಲ ನೀಡಿದ ತಂದೆ ಕೃಷ್ಣದಾಸ್ ಪುರಾಣಿಕ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಎನ್.ಆರ್.ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ…

Spread the love

Related post

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು…

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು…

ಗದಗ ನಗರದ ರೇಪ್ ಕೇಸ್…ಆರೋಪಿಗಳು ಇಬ್ಬರಲ್ಲ ನಾಲ್ವರು… ಗದಗ,ಆ17,Tv10 ಕನ್ನಡ ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ನಿರಂತರ ಅತ್ಯಚಾರ ನಡೆದ ಪ್ರಕರಣದಲ್ಲಿ ಆರೋಪಿಗಳ ಸಂಖ್ಯೆ ನಾಲ್ಕಕ್ಕೆ ಏರಿದೆ.ಮೂರು…
ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…

Leave a Reply

Your email address will not be published. Required fields are marked *