ಮೈಸೂರು:ಮನೆ ಮನೆಗೂ ಅಯೋಧ್ಯೆ ರಾಮಮಂದಿರದ ಮಂತ್ರಾಕ್ಷ್ಯತೆ,ಶ್ರೀರಾಮನ ಭಾವಚಿತ್ರ ವಿತರಣೆ…ಜಿಲ್ಲಾ ಭ್ರಾಹ್ಮಣ ಯುವ ವೇದಿಕೆಯಿಂದ ಕಾರ್ಯಕ್ರಮ…
- TV10 Kannada Exclusive
- January 18, 2024
- No Comment
- 250

ಮೈಸೂರು,ಜ18,Tv10 ಕನ್ನಡ
ಕೋಟ್ಯಂತರ ಹಿಂದೂಗಳ ರಾಮಮಂದಿರ ನಿರ್ಮಾಣದ ಕನಸು ಜ. 22ಕ್ಕೆ ನನಸಾಗಲಿದೆ ಈ ದಿನ ಮಂದಿರದ ಭವ್ಯ ಉದ್ಘಾಟನೆ ಹಾಗೂ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿ ಮಂತ್ರಾಕ್ಷತೆ ಹಾಗೂ ಆಮಂತ್ರಣ ಪತ್ರಿಕೆ ಮತ್ತು ಶ್ರೀ ರಾಮನ ಭಾವಚಿತ್ರ ಮನೆಮನೆಗೆ ತಲುಪಿಸಿದರು. ಹಿರಿಯ ಸಮಾಜಸೇವಕ ಕೆ ರಘುರಾಮ್ ವಾಜಪೇಯಿ ಮಾತನಾಡಿ ಜಗತ್ತು ಕಾತರದಿಂದ ಕಾಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮವು ಕೇವಲ ಹಿಂದುಗಳಿಗೆ ಮಾತ್ರವಲ್ಲ ಇಡೀ ಭಾರತ ದೇಶದ ಹೆಮ್ಮಗೆ ಕಾರಣವಾಗಿದೆ. ನೂರಾರು ವರ್ಷಗಳ ಸಾಧುಸಂತರ ತಪಸ್ಸಿನ ಫಲ. ಆಧುನಿಕ ಯುಗದ ಆಕರ್ಷಣೆಗೆ ಒಳಗಾಗಿ ಸಂಸ್ಕಾರ ಹೀನರಾಗುತ್ತಿರುವ ಯುವಕರಿಗೆ ಮರ್ಯಾದಾ ಪುರುಷ ರಾಮನ ಜೀವನವೇ ಸ್ಫೂರ್ತಿ, ಯುವಕರು ಆಧ್ಯಾತ್ಮದ ಆಸರೆ, ಸತತ ಪರಿಶ್ರಮದ ತಳಹದಿಯ ಮೇಲೆ ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಇದರಿಂದ ಸದೃಢ ಸಮಾಜದ ನಿರ್ಮಾಣ ಸಾಧ್ಯ ಎಂದು ಹೇಳಿದರು
ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ,
ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,
ಅಗಸ್ತ್ಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಹಾಲಿ ನಿರ್ದೇಶಕರಾದ ಎಂ ಆರ್ ಬಾಲಕೃಷ್ಣ, ಕೆ ಎನ್ ಅರುಣ್, ಸಂಘಟನಾ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿ ಎನ್ ಕೃಷ್ಣ, ಪೇಪರ್ ಮುರಳಿ, ಮಹೇಶ್ ಕುಮಾರ್, ಮಾಜಿನಗರ ಪಾಲಿಕಾ ಸದಸ್ಯರಾದ ಯಮುನಾ, ಪುಟ್ಟಸ್ವಾಮಿ, ಕಡಕೋಳ ಜಗದೀಶ್,ಸುಚೇಂದ್ರ, ರಂಗನಾಥ್, ಜಯಸಿಂಹ, ವಿಜಯ್ ಕುಮಾರ್, ಚಕ್ರಪಾಣಿ, ಎಸ್ ಬಿ ವಾಸುದೇವಮೂರ್ತಿ, ಅಪೂರ್ವ ಸುರೇಶ್, ಬೈರತಿ ಲಿಂಗರಾಜು, ಎಸ್ ಎನ್ ರಾಜೇಶ್, ರಾಕೇಶ್, ಡಿ ಕೆ ನಾಗಭೂಷಣ್, ನಾಗಶ್ರೀ ಸುಚಿಂದ್ರ, ಹಾಗೂ ಇನ್ನಿತರರು ಹಾಜರಿದ್ದರು