ಮೈಸೂರು:ಗೃರ್ಭಿಣಿ ಮಹಿಳೆಯರಿಗೆ ಸೀಮಂತ…ಆರೋಗ್ಯಾಧಿಕಾರಿಗಳಿಂದ ಕಾರ್ಯಕ್ರಮ…
- TV10 Kannada Exclusive
- January 18, 2024
- No Comment
- 141

ಮೈಸೂರು,ಜ18,Tv10 ಕನ್ನಡ

ಮೈಸೂರು ಜಿಲ್ಲೆಯಲ್ಲಿ ಆರೋಗ್ಯಾಧಿಕಾರಿಗಳು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯಿಂದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರಿನ ತುಳಸಿ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಡಿಎಚ್‌ಓ ಡಾ ಪಿ ಸಿ ಕುಮಾರಸ್ವಾಮಿ ಸೇರಿ ಹಲವರು ಭಾಗಿಯಾಗಿ
ಗರ್ಭಿಣಿ ಮಹಿಳೆಯರಿಗೆ ಅರಿಶಿನ ಕುಂಕುಮ ಬಳೆ ನೀಡಿದರು. ವೈದ್ಯಾಧಿಕಾರಿಗಳು ಗರ್ಭಿಣಿ ಮಹಿಳೆಯರಿಗೆ ಆರತಿ ಬೆಳಗಿ ಸೀಮಂತ ಕಾರ್ಯ ನೆರವೇರಿಸಿದರು.
ಇದೇ ವೇಳೆ ಪ್ರಸವ ಪೂರ್ವ ಆರೈಕೆ ಪೌಷ್ಠಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಿದರು…