ಅಕ್ರಮ ಸಂಭಂಧ ಪ್ರಶ್ನಿಸಿದ್ದೇ ತಪ್ಪಾಯ್ತು…ಪತ್ನಿಗೆ ಹಿಗ್ಗಾಮುಗ್ಗ ಥಳಿತ…ಪತಿ ಅಂದರ್…
- TV10 Kannada Exclusive
- January 20, 2024
- No Comment
- 447


ಹುಣಸೂರು,ಜ20,Tv10 ಕನ್ನಡ
ಅಕ್ರಮ ಸಂಭಂಧ ಪ್ರಶ್ನಿಸಿದ ಪತ್ನಿಗೆ ಬೆಲ್ಟ್ ನಿಂದ ಹಿಗ್ಗಾಮುಗ್ಗ ಥಳಿಸಿದ ಪತಿರಾಯನನ್ನ ಹುಣಸೂರು ಪೊಲೀಸರು ಬಂಧಿಸಿದ್ದಾರೆ.ಹುಣಸೂರು ತಾಲೂಕಿನ ಹಂಚ್ಯಾ ಗ್ರಾಮದ ಸೈಯದ್ ಯಾಸಿನ್ ಬಂಧಿತ ಪತಿರಾಯ.ಅಂಬ್ರೀನ್ ಭಾನು ಹಲ್ಲೆಗೆ ಒಳಗಾದ ಪತ್ನಿ.12 ವರ್ಷಗಳ ಹಿಂದೆ ಅಂಬ್ರೀನ್ ಭಾನು ಹಾಗೂ ಸೈಯದ್ ಯಾಸಿನ್ ನಿಕ್ಕಾ ನಡೆದಿದ್ದು ದಂಪತಿಗೆ ಮೂವರು ಮಕ್ಕಳಿದ್ದರು.ಪ್ರಾರಂಭದಲ್ಲಿ ಅನ್ಯೋನ್ಯ ಸಂಸಾರ ನಡೆಸಿದ ದಂಪತಿ ಮಧ್ಯೆ ಪರಸ್ತ್ರೀ ಎಂಟ್ರಿ ಕೊಟ್ಟಿದ್ದಳು.ಹೇಮಲತಾ ಎಂಬಾಕೆಯ ಜೊತೆ ಅಕ್ರಮ ಸಂಭಂಧ ಬೆಳೆಸಿದ ಸೈಯದ್ ಯಾಸಿನ್ ಪತ್ನಿ ಅಂಬ್ರೀನ್ ಭಾನುಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾನೆ.ಹೇಮಲತಾಳನ್ನ ಮನೆಗೇ ಕರೆತಂದು ಪತ್ನಿಯ ಮುಂದೆ ಅಸಭ್ಯವಾಗಿ ವರ್ತಿಸಿದ್ದಾನೆ.ಈ ಬಗ್ಗೆ ಅಂಬ್ರೀನ್ ಭಾನು ಪ್ರಶ್ನಿಸಿದಾಗ ಕುಡಿದ ಮತ್ತಿನಲ್ಲಿ ಹಲ್ಲೆ ನಡೆಸಿದ್ದಾನೆ.ಜನವರಿ 16 ರಂದು ಇದೇ ವಿಚಾರದಲ್ಲಿ ಗಲಾಟೆಯಾದಾಗ ಬೆಲ್ಟ್ ನಲ್ಲಿ ಹಿಗ್ಗಾ ಮುಗ್ಗ ಥಳಿಸಿ ಪರಾರಿಯಾಗಿದ್ದಾನೆ.ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪತಿ ಸೈಯದ್ ಯಾಸಿನ್ ನ ಬಂಧಿಸಿದ್ದಾರೆ…