ಲಷ್ಕರ್ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ…ಆಟೋದಲ್ಲಿ ಮರೆತು ಹೋಗಿದ್ದ ಚಿನ್ನಬೆಳ್ಳಿ ಪದಾರ್ಥ ಮಾಲೀಕರಿಗೆ ವಾಪಸ್…
- TV10 Kannada Exclusive
- January 20, 2024
- No Comment
- 527
ಮೈಸೂರು,ಜ20,Tv10 ಕನ್ನಡ
ಲಷ್ಕರ್ ಠಾಣೆ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆಟೋದಲ್ಲಿ ಮರೆತಹೋಗಿದ್ದ ಚಿನ್ನ ಬೆಳ್ಳಿ ಪದಾರ್ಥಗಳಿದ್ದ ಬ್ಯಾಗ್ ಮಾಲೀಕರಿಗೆ ಸೇರಿದೆ.40 ಗ್ರಾಂ ತೂಕದ ಚಿನ್ನದ ವಡವೆಗಳು ಹಾಗೂ 30 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ಮಾಲೀಕರಿಗೆ ಸೇರಿದೆ.ಲಷ್ಕರ್ ಠಾಣೆಯ ಕ್ಷಿಪ್ರ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.
ಬೆಂಗಳೂರಿನ ನಾಯಂಡನಗರದ ನಿವಾಸಿ ಇದಾಯತ್ ಉಲ್ಲಾ ರವರು ಇಂದು ಸಂಭಂಧಿಕರ ಮದುವೆಗೆ ಅಟೆಂಡ್ ಮಾಡಲು ಬಂದಿದ್ದರು.ಉದಯಗಿರಿಯ ಫಂಕ್ಷನ್ ಹಾಲ್ ಒಂದರಲ್ಲಿ ಮದುವೆ ಮುಗಿಸಿ ಬೆಂಗಳೂರಿಗೆ ತೆರಳಲು ಆಟೋದಲ್ಲಿ ಲಗ್ಗೇಜ್ ಸಮೇತ ಬಂದಿದ್ದರು.ಬಸ್ ಹಿಡಿಯುವ ಆತುರದಲ್ಲಿ ಚಿನ್ನಬೆಳ್ಳಿ ಪದಾರ್ಥಗಳಿರುವ ಬ್ಯಾಗ್ ಮರೆತಿದ್ದರು.ಕೂಡಲೇ ಲಷ್ಕರ್ ಠಾಣೆ ನಿರೀಕ್ಷಕರಾದ ಪ್ರಸಾದ್ ರವರ ಗಮನಕ್ಕೆ ತಂದಾಗಿ ಮಿಂಚಿನ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆಟೋ ಪತ್ತೆ ಹಚ್ಚಿ ಮರೆತುಹೋಗಿದ್ದ ಚಿನ್ನ ಬೆಳ್ಳಿ ಪದಾರ್ಥಗಳಿರುವ ಬ್ಯಾಗ್ ವಶಪಡಿಸಿಕೊಂಡು ಮಾಲೀಕರಾದ ಇದಾಯತ್ ಉಲ್ಲಾ ರವರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆಟೋ ಪತ್ತೆ ಮಾಡುವಲ್ಲಿ ಲಷ್ಕರ್ ಠಾಣೆಯ ಎಎಸ್ಸೈ ಶಂಕರ್,ಸಿಬ್ಬಂದಿಗಳಾದ ನಡಾಫ್ ಹಾಗೂ ಕಿರಣ್ ಕುಮಾರ್ ಶ್ರಮಿಸಿದ್ದಾರೆ.
ಲಷ್ಕರ್ ಠಾಣೆಯ ಕ್ಷಿಪ್ರ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ಹಾಗೂ ಎಸಿಪಿ ಶಾಂತಮಲ್ಲಪ್ಪ ಪ್ರಶಂಸಿಸಿದ್ದಾರೆ…