ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷನ ಕೊಲೆ ಪ್ರಕರಣ…ಆರೋಪಿ ಶಿವು ಬಂಧನ…
- CrimeTV10 Kannada Exclusive
- January 24, 2024
- No Comment
- 173
ನಂಜನಗೂಡು,ಜ24,Tv10 ಕನ್ನಡ
ಹಾಲು ಉತ್ಪಾದಕರಿಗೆ ನೀಡಬೇಕಾದ ಹಣ ಪಾವತಿಸುವಂತೆ ಬುದ್ದಿವಾದ ಹೇಳಿದ ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣನಾದ ಕಾರ್ದರ್ಶಿಯನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಎಬ್ಜಾಲ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವು ಬಂಧಿತ ಆರೋಪಿ. ಹಾಲು ಉತ್ಪಾದಕರಿಗೆ ಹಣ ನೀಡದೆ ಸತಾಯಿಸುತ್ತಿದ್ದ ಕಾರ್ಯದರ್ಶಿ ಶಿವು ಗೆ ಉಪಾಧ್ಯಕ್ಷ ಮಹದೇವನಾಯಕ ಬುದ್ದಿವಾದ ಹೇಳಿದ್ದರು.ಶಿವು ತಾಯಿ ರವಿಯಮ್ಮ ಗೆ ವಿಚಾರ ತಿಳಿಸಿ ಹಣ ಪಾವತಿಸುವಂತೆ ಹೇಳಿದ್ದರು.ಈ ವೇಳೆ ಶಿವು ಹಾಗೂ ಮಹದೇವನಾಯಕ ನಡುವೆ ಮಾತೊನ ಚಕಮಕಿ ನಡೆದಿತ್ತು.ಮಹದೇವನಾಯಕನಿಗೆ ಹಲ್ಲೆ ನಡೆಸಿದ್ದ ಶಿವು ನಾಪತ್ತೆಯಾಗಿದ್ದ.ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮಹದೇವನಾಯಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.ಪತಿಯ ಸಾವಿಗೆ ಶಿವು ಕಾರಣ ಎಂದು ಮಹದೇವನಾಯಕ ಪತ್ನಿ ಹುಲ್ಲಹಳ್ಳಿ ಠಾಣೆಗೆ ದೂರು ನೀಡಿ ತಾಯಿ ಹಾಗೂ ಮಗನ ವಿರುದ್ದ ಪ್ರಕರಣ ದಾಖಲಿಸಿದ್ದರು. ಹುಲ್ಲಹಳ್ಳಿ ಪೊಲೀಸರು ನಾಪತ್ತೆಯಾಗಿದ್ದ ಕಾರ್ಯದರ್ಶಿ ಶಿವು ನನ್ನು ಬಂಧಿಸಿದ್ದಾರೆ…