ಪ್ರೀತಿಸಿದ ಹುಡುಗಿ ಮದುವೆಯಾಗಲು ಮನೆಯವರ ವಿರೋಧ…ಯುವಕ ವಿಷ ಸೇವಿಸಿ ಆತ್ಮಹತ್ಯೆ…
- Crime
- January 25, 2024
- No Comment
- 383
ಬನ್ನೂರು,ಜ25,Tv10 ಕನ್ನಡ
ಪ್ರೀತಿಸಿದ ಹುಡುಗಿಯನ್ನ ಮದುವೆಯಾಗಲು ಮನೆಯವರು ನಿರಾಕರಿಸಿದ ಹಿನ್ನಲೆ ಬೇಸತ್ತ ಯುವಕ ಕ್ರಿಮಿನಾಶಕ ಔಷಧಿ ಕುಡಿದು ಆತ್ಮಹತ್ಯೆಗೆ ಶರಣಾದ ಘಟನೆ ಬನ್ನೂರಿನ ರಂಗಾಚಾರಿ ಹುಂಡಿ ಗ್ರಾಮದಲ್ಲಿ ನಡೆದಿದೆ.ಅವಿನಾಶ್(30) ಮೃತ ದುರ್ದೈವಿ.ರಂಗಾಚಾರಿ ಹುಂಡಿ ಗ್ರಾಮದ ಯುವತಿಯನ್ನ ಅವಿನಾಶ್ ಪ್ರೀತಿಸುತ್ತಿದ್ದ.ಮದುವೆಯಾಗಿ ಬಾಳಸಂಗಾತಿ ಮಾಡಿಕೊಳ್ಳು ಇಚ್ಛಿಸಿದ್ದು ತನ್ನ ಮನೆಯವರೊಂದಿಗೆ ಪ್ರಸ್ತಾಪ ಮಾಡಿದ್ದ.ಇದಕ್ಕೆ ಮನೆಯವರು ನಿರಾಕರಿಸಿದ್ದರು.ಇದರಿಂದ ಮನನೊಂದ ಅವಿನಾಶ್ ಕ್ರಿಮಿನಾಶಕ ಔಷಧಿ ಸೇವಿಸಿದ್ದಾನೆ.ಕೂಡಲೇ ಈತನನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.ಚಿಕಿತ್ಸೆ ಫಲಕಾರಿಯಾಗದೆ ಅವಿನಾಶ್ ಮೃತಪಟ್ಟಿದ್ದಾನೆ.ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…