ಹುಡುಗಿ ಚುಡಾಯಿಸಿದ ವಿಚಾರದಲ್ಲಿ ಕಿರಿಕ್…ಆಟೋ ಡ್ರೈವರ್ ಕೊಲೆ…ರೌಡಿ ಶೀಟರ್ ಸೇರಿದಂತೆ ಮೂವರಿಂದ ಕೃತ್ಯ…

  • Crime
  • January 27, 2024
  • No Comment
  • 609

ಮೈಸೂರು,ಜ27,Tv10 ಕನ್ನಡ

ಹುಡುಗಿ ಚುಡಾಯಿಸಿದ ಹಿನ್ನಲೆ ಹಾಗೂ ಹಳೇ ದ್ವೇಷ ಬೆಳೆಸಿಕೊಂಡ ರೌಡಿ ಶೀಟರ್ ತನ್ನ ಸಹೋದರ ಹಾಗೂ ಸಂಭಂಧಿಕರ ಜೊತೆ ಸೇರಿ ಆಟೋ ಡ್ರೈವರ್ ಗೆ ಚಾಕುವಿನಿಂದ ಇರಿದು ಕೊಂದ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಕಳ್ಳಿ ಗ್ರಾಮದಲ್ಲಿ ನಡೆದಿದೆ.ಗೂಡ್ಸ್ ಆಟೋ ಡ್ರೈವರ್ ಆಗಿರುವ ರವಿಚಂದ್ರ(33) ಮೃತ ದುರ್ದೈವಿ.ರೌಡಿ ಶೀಟರ್ ಸುನಿಲ್ ರಾಜ್,ಈತನ ತಮ್ಮ ನಿಖಿಲ್ ರಾಜ್ ಹಾಗೂ ಇವರ ಚಿಕ್ಕಪ್ಪ ನಾರಾಯಣ ಕೊಲೆ ಆರೋಪಿಗಳು.

ಮೃತನ ತಮ್ಮ ಶಿವರಾಜ್ ಗಾರೆ ಕೆಲಸ ಮಾಡಿಕೊಂಡಿದ್ದು ಈತನ ಸಹಚರನೊಬ್ಬ ಸುನಿಲ್ ರಾಜ್ ಗೆ ಪರಿಚಯ ಇರುವ ಹುಡುಗಿಗೆ ಚುಡಾಯಿಸಿದ್ದಾನೆ.ಈ ವೇಳೆ ಗಲಾಟೆ ಆಗಿದ್ದು ಶಿವರಾಜ್ ಮಧ್ಯೆ ಪ್ರವೇಶಿಸಿ ಗಲಾಟೆ ಬಿಡಿಸಿದ್ದಾರೆ.ಇದನ್ನೇ ದ್ವೇಷ ಬೆಳೆಸಿಕೊಂಡ ಸುನಿಲ್ ರಾಜ್ ಹಾಗೂ ನಿಖಿಲ್ ರಾಜ್ ನಿನ್ನೆ ರಾತ್ರಿ ಚಿಕ್ಕಪ್ಪ ನಾರಾಯಣ್ ಜೊತೆ ರವಿಚಂದ್ರ ಮನೆ ಬಳಿ ಬಂದು ಅವ್ಯಾಚ ಶಬ್ದಗಳಿಂದ ಆವಾಜ್ ಹಾಕಿದ್ದಾರೆ.ಈ ವೇಳೆ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಈ ವೇಳೆ ಸುನಿಲ್ ರಾಜ್ ಡ್ರಾಗನ್ ನಿಂದ ರವಿಚಂದ್ ಹೊಟ್ಟೆಗೆ ಚುಚ್ಚಿದ್ದಾನೆ.ಜಗಳ ಬಿಡಿಸಲು ಬಂದ ಶಿವರಾಜ್ ಹಾಗೂ ಮಾವ ಮಹೇಶ್ ಗೂ ಗಾಯವಾಗಿದೆ.ಚಾಕು ಇರಿತದಿಂದ ಗಾಯಗೊಂಡ ರವಿಚಂದ್ರ ನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.ಈ ಸಂಭಂಧ ಸುನಿಲ್ ರಾಜ್,ನಿಖಿಲ್ ರಾಜ್ ಹಾಗೂ ನಾರಾಯಣ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *