ಸಾಲಗಾರರ ಹಾವಳಿ ಹಿನ್ನಲೆ…ಇಡೀ ಕುಟುಂಬ ಮಿಸ್ಸಿಂಗ್…ಡೆತ್ ನೋಟ್ ವಾಯ್ಸ್ ಮೆಸೇಜ್ ಹಾಕಿ ನಾಪತ್ತೆ…

ಮೈಸೂರು,ಜ29,Tv10 ಕನ್ನಡ

ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆಯಾದ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದೆ.ಇಡೀ ಕುಟುಂಬ ನಾಪತ್ತೆಯಾಗಿ 8 ದಿನ ಕಳೆದರೂ ಸುಳಿವು ಪತ್ತೆಯಾಗಿಲ್ಲ.

ಕೆ.ಜಿ.ಕೊಪ್ಪಲಿನ ಮಹೇಶ್(35),ಈತನ ಪತ್ನಿ ಭವಾನಿ(28),ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ(55) ನಾಪತ್ತೆಯಾದವರು.ಈ ಸಂಭಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.ಮಾರ್ಕೆಟಿಂಗ್ ಬಿಸಿನೆಸ್ ನಡೆಸುತ್ತಿದ್ದ ಮಹೇಶ್ ವೀರೇಶ್ ಎಂಬುವರ ವ್ಯವಹಾರಕ್ಕೆ ಸಾಥ್ ನೀಡಿದ್ದಾರೆ.ಮಹೇಶ್ ಪರಿಚಯ ಹೇಳಿಕೊಂಡು ವೀರೇಶ್ 30 ರಿಂದ 35 ಲಕ್ಷ ಸಾಲ ಪಡೆದಿದ್ದಾನೆ.ವ್ಯವಹಾರದಲ್ಲಿ ನಷ್ಟವಾದ ಕಾರಣ ವೀರೇಶ್ ರಾತ್ರೋ ರಾತ್ರಿ ಎಸ್ಕೇಪ್ ಆಗಿದ್ದಾನೆ.ವೀರೇಶ್ ಗೆ ಸಾಲ ನೀಡಿದ ಮಂದಿ ಮಹೇಶ್ ಮೇಲೆ ಒತ್ತಡ ಹೇರಿದ್ದಾರೆ.ಪ್ರಾರಂಭದಲ್ಲಿ 2 ಲಕ್ಷಕ್ಕೆ ಗ್ಯಾರೆಂಟಿ ಕೊಟ್ಟ ಮಹೇಶ್ ನಂತರ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ.ಸಾಲಗಾರರ ನಿರಂತರ ಒತ್ತಡಕ್ಕೆ ಹೆದರಿದ ಮಹೇಶ್ ತಮ್ಮ ಸ್ನೇಹಿತರಾದ ದರ್ಶನ್ ಎಂಬುವರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಮಾಡಿದ್ದಾರೆ. ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದೆ.ಸಾಲಗಾರರು ನನಗೆ ತೊಂದರೆ ಕೊಡುತ್ತಿದ್ದಾರೆ.ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ.ಸಾಲಗಾರರು ರಾಕ್ಷಸರಂತೆ ವರ್ತಿಸುತ್ತಿದ್ದಾರೆ.ನಾವು ಕೆರೆ ಅಥವಾ ಭಾವಿಗೆ ಬೀಳುತ್ತೇವೆ.ಒಂದು ವೇಳೆ ಮೃತದೇಹ ದೊರೆತರೆ ಅಂತ್ಯಕ್ರಿಯೆ ಮಾಡಿ.ಅವರನ್ನಂತೂ ಬಿಡಬೇಡಿ ಎಂದು ರಂಜಿತಾ,ದಿನೇಶ್,ಚಂದ್ರು ಹಾಗೂ ನೇತ್ರ ಎಂಬುವರ ಹೆಸರನ್ನ ವಾಯ್ಸ್ ಮೆಸೇಜ್ ನಲ್ಲಿ ಉಲ್ಲೇಖಿಸಿದ್ದಾರೆ. ಜನವರಿ 20 ರಂದು ಕಾಣೆಯಾದ ಇವರು ಇದುವರೆಗೂ ಪತ್ತೆಯಾಗಿರುವುದಿಲ್ಲ.ಸರಸ್ವತಿ ಪುರಂ ಠಾಣೆ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿದೆ.ಇವರ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ.ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಹತ್ತಿರದ ಪೊಲೀಸ್ ಠಾಣೆಗಾಗಲಿ ಅಥವಾ ಸರಸ್ವತಿಪುರಂ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಬಹುದು…

Spread the love

Related post

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ…

ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಚ್.ವಿ. ರಾಘವೇಂದ್ರ ಅವರಿಗೆ ಆತ್ಮೀಯ ಸನ್ಮಾನ ಸರಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಚ್.ವಿ. ರಾಘವೇಂದ್ರ ಅವರ…
ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್…

ಮೈಸೂರಿನಲ್ಲಿ ವಿವಾಹಿತೆ ಕಿಡ್ನಾಪ್…ರಾಮನಗರದಲ್ಲಿ ಅಕ್ರಮ ಬಂಧನ…ಪೊಲೀಸರಿಂದ ರಕ್ಷಣೆ…ಮೂವರು ಅಂದರ್… ಮೈಸೂರು,ಜೂ30,Tv10 ಕನ್ನಡ ಪ್ರೀತಿಸಿ ಮದುವೆಯಾದ ವಿವಾಹಿತೆಯನ್ನ ಮೂವರು ವ್ಯಕ್ತಿಗಳು ಕಿಡ್ನಾಪ್ ಮಾಡಿ ರಾಮನಗರದ ಮನೆಯೊಂದರಲ್ಲಿ ಅಕ್ರಮವಾಗಿ ಬಂಧನದಲ್ಲಿಟ್ಟ ಘಟನೆ…
ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು…

ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ…

ಗಣಪತಿ ಆಶ್ರಮಕ್ಕೆ ತಲುಪಿದ ಲಕ್ಷ್ಮಿನರಸಿಂಹ ಹಾಗೂ ಪಂಚಮುಖಿ ಆಂಜನೇಯ ವಿಗ್ರಹಗಳು…ಗಟ್ಟವಾಡಿ ಗ್ರಾಮಕ್ಕೆ ತೆರಳಲಿರುವ ಮೂರ್ತಿಗಳು ಮೈಸೂರು,ಜೂ29,Tv10 ಕನ್ನಡ ನಂಜನಗೂಡು ತಾಲೂಕು ಗಟ್ಟವಾಡಿ ಗ್ರಾಮದ ಶ್ರೀ ಸುಭ್ರಹ್ಮಣ್ಯ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಯಾಗಲಿರುವ…

Leave a Reply

Your email address will not be published. Required fields are marked *