ಕುಡುಕರ ಅಡ್ಡೆಯಾದ ಅಪೂರ್ಣಗೊಂಡ ಅಂಗನವಾಡಿ ಕೇಂದ್ರ…ಕುರಿದೊಡ್ಡಿ ಆಶ್ರಯ ಪಡೆದ ಮಕ್ಕಳು…
- TV10 Kannada Exclusive
- February 1, 2024
- No Comment
- 273
ಮೈಸೂರು,ಫೆ1,Tv10 ಕನ್ನಡ
ಅಪೂರ್ಣಗೊಂಡ ಅಂಗನವಾಡಿ ಕೇಂದ್ರವೊಂದು ಕುಡುಕರ ಅಡ್ಡೆಯಾಗಿ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.ಮಕ್ಕಳಿಗರ ಪಾಠಪ್ರವಚನ ನಡೆಯಬೇಕಿದ್ದ ಸ್ಥಳದಲ್ಲಿ ಮಧ್ಯದ ಬಾಟಲಿಗಳು ಪ್ಯಾಕೆಟ್ ಗಳ ರಾಶಿ ತುಂಬಿ ಅಧಿಕಾರಿಗಳನ್ನ ಹಂಗಿಸುವಂತೆ ಮಾಡಿದೆ.ಅಂಗನವಾಡಿಯಲ್ಲಿ ಪಾಠ ಪ್ರವಚನ ಕೇಳಬೇಕಿದ್ದ ಮಕ್ಕಳು ಕುರಿದೊಡ್ಡಿ ಆಶ್ರಯ ಪಡೆದಿದ್ದಾರೆ.
ಮೈಸೂರು ತಾಲೂಕು ಜಯಪುರ ಹೋಬಳಿ ಹನಗಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದ ದುಃಸ್ಥಿತಿ ಇದು.6 ವರ್ಷಗಳ ಹಿಂದೆ ಅಂಗನವಾಡಿಗಾಗಿ ಕಟ್ಟಡ ಕಾಮಗಾರಿ ಆರಂಭವಾಯಿತು.ಅದ್ಯಾವ ಕಾರಣವೋ ಗೊತ್ತಿಲ್ಲ ಅರ್ಧಕ್ಕೇ ಕಾಮಗಾರಿ ಸ್ಥಗಿತಗೊಂಡಿದೆ.ಮಕ್ಕಳ ಶೈಕ್ಷಣಿಕ ಚಟುವಟಿಕೆಗಾಗಿ ಬಳಕೆಯಾಗಬೇಕಿದ್ದ ಕಟ್ಟಡ ಪೂರ್ಣಗೊಳ್ಳದೇ ಕುಡುಕರ ಅಡ್ಡೆಯಾಗಿದೆ.ಪ್ರತಿದಿನ ಮಧ್ಯಪ್ರಿಯರು ಅಪೂರ್ಣಗೊಂಡ ಅಂಗನವಾಡಿ ಕಟ್ಟಡವನ್ನ ತಮ್ಮ ಅಡ್ಡೆಯಾಗಿ ಬಳಸಿಕೊಳ್ಳುತ್ತಿದ್ದಾರೆ.ಕುಡುಕರ ವರ್ತನೆಯಿಂದ ಸ್ಥಳೀಯರು ಬೇಸತ್ತಿದ್ದಾರೆ.ಈ ಬಗ್ಗೆ ಸಂಭಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದರೂ ಕ್ಯಾರೆ ಅನ್ನುತ್ತಿಲ್ಲ.ಲಕ್ಷಾಂತರ ವೆಚ್ಚದಲ್ಲಿ ಆರಂಭವಾದ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳು ಉರುಳುತ್ತಾ ಬಂದರೂ ಯಾರೂ ಇತ್ತ ತಿರುಗಿ ನೋಡುತ್ತಿಲ್ಲ.ಕೂಡಲೇ ಸಂಭಂಧ ಪಟ್ಟ ಅಧಿಕಾರಿಯಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಎಚ್ಚೆತ್ತು ಅಂಗನವಾಡಿ ಕಟ್ಟಡವನ್ನ ಪೂರ್ಣಗೊಳಿಸುವತ್ತ ಗಮನ ಹರಿಸಬೇಕಿದೆ.ಕುರಿದೊಡ್ಡಿಯಲ್ಲಿ ಪಾಠ ಪ್ರವಚನಗಳನ್ನ ಕೇಳುತ್ತಿರುವ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕಿದೆ…